ADVERTISEMENT

ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:23 IST
Last Updated 7 ಸೆಪ್ಟೆಂಬರ್ 2025, 7:23 IST
ಹಲಗೂರು ಸಮೀಪದ ಎಚ್. ಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರನ್ನು ಅಭಿನಂಧಿಸಲಾಯಿತು
ಹಲಗೂರು ಸಮೀಪದ ಎಚ್. ಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರನ್ನು ಅಭಿನಂಧಿಸಲಾಯಿತು   

ಹಲಗೂರು: ಸಮೀಪದ ಎಚ್.ಬಸಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಶನಿವಾರ ಚುನಾವಣೆ ನಡೆಯಿತು.

11 ಸದಸ್ಯ ಬಲದ ಸಂಘದ ನಿರ್ದೇಶಕರ ಸ್ಥಾನಕ್ಕೆ ಬಿ.ಗುರುರಾಜು, ಬಿ.ಟಿ.ಪುಟ್ಟಸ್ವಾಮಿ, ಬಸವರಾಜು, ರಮೇಶ್, ಬಿ.ಕೆ.ಲಿಂಗರಾಜು, ಬಿ.ಎಂ.ಶಿವರಾಜು, ಶಿವನಂಜಯ್ಯ, ಕೆಂಪಯ್ಯ, ಗೀತಾ, ಆರ್.ರಂಜಿತಾ, ಬಿ.ಸುರೇಶ್ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾ ಅಧಿಕಾರಿ ರಾಮಕೃಷ್ಣ ಅವಿರೋಧ ಆಯ್ಕೆ ಘೋಷಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಲಿಂಗೇಗೌಡ ಆಯ್ಕೆಯಾದವರನ್ನು ಅಭಿನಂಧಿಸಿದರು.

ADVERTISEMENT

ಗ್ರಾಮದ ಮುಖಂಡರಾದ ಸಿದ್ದೇಗೌಡ, ಕಾಳದೇವೆಗೌಡ, ಮರಿಸ್ವಾಮಿಗೌಡ, ಪುಟ್ಟೇಗೌಡ, ಸಂಘದ ಕಾರ್ಯದರ್ಶಿ ಶಿವಲಿಂಗೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.