ADVERTISEMENT

ಹಲಗೂರು | ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:23 IST
Last Updated 3 ಜೂನ್ 2025, 13:23 IST
ರಾಜು
ರಾಜು   

ಹಲಗೂರು: ಸಮೀಪದ ಕೋಡಿಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಕೆಂಚಯ್ಯ ಅವರ ಪುತ್ರ ರಾಜು (65) ಮಂಗಳವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹುಲ್ಲಹಳ್ಳಿ ರಸ್ತೆಯಲ್ಲಿರುವ ತಮ್ಮ ಜಮೀನಿಗೆ ಕೆಲಸ ಮಾಡಲು ರಾಜು ತೆರಳಿದ್ದರು. ಕೃಷಿ ಪಂಪಸೆಟ್‌ಗೆ ಅಳವಡಿಸಿದ್ದ ಸರ್ವೀಸ್ ಸಂಪರ್ಕದಲ್ಲಿದ್ದ ವೈರ್ ಪಕ್ಕಕ್ಕೆ ಸರಿಸಲು ಹೋದಾಗ ವಿದ್ಯುತ್ ಸ್ಪರ್ಶಿಸಿದೆ.

ಘಟನೆಯ ಸ್ಥಳಕ್ಕೆ ಕೆಪಿಟಿಸಿಎಲ್ ಹಾಡ್ಲಿ ವೃತ್ತದ ಜೂನಿಯರ್ ಎಂಜಿನಿಯರ್ ಮಧುಸೂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.