ADVERTISEMENT

ರಚನಾತ್ಮಕ ಕಲಿಕೆಗೆ ವಸ್ತು ಪ್ರದರ್ಶನ ಸಹಕಾರಿ:ವಿ.ಇ.ಉಮಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 12:49 IST
Last Updated 23 ಜನವರಿ 2025, 12:49 IST
ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಆಯೋಜಿಸಿದ್ದ ಕಲಿಕೋಪಕರಣ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ವಿ.ಇ.ಉಮಾ ಉದ್ಘಾಟಿಸಿದರು
ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಆಯೋಜಿಸಿದ್ದ ಕಲಿಕೋಪಕರಣ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ವಿ.ಇ.ಉಮಾ ಉದ್ಘಾಟಿಸಿದರು   

ಹಲಗೂರು: ‘ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ತಾರ್ಕಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ವಿಮರ್ಶಾತ್ಮಕ ಚಿಂತನೆಗಳಿಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳ ಕಲಿಕೋಪಕರಣ ಪ್ರದರ್ಶನ ಸಹಕಾರಿಯಾಗಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ಹೇಳಿದರು.

ಹಲಗೂರಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ‘2024–25ನೇ ಸಾಲಿನ ‘ಮಕ್ಕಳ ಕಲಿಕೋಪಕರಣ ಪ್ರದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಪಬ್ಲಿಕ್ ಶಾಲೆಯ 340ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದೊಂದಿಗೆ ತಯಾರಿಸಿದ್ದ ವಿಜ್ಞಾನ, ಪರಿಸರ, ಗಣಿತ ವಿಷಯಗಳ ಕುರಿತ ಚಟುವಟಿಕೆಗಳ ಮಾದರಿಗಳನ್ನು ಪ್ರದರ್ಶನ ಮಾಡಿದರು.

ADVERTISEMENT

ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಸೌರವ್ಯೂಹ, ಗಣಿತದ ಆಕೃತಿಗಳು, ಮಾನವನ ವಿಸರ್ಜನಾಂಗವ್ಯೂಹ, ಕನ್ನಡ ಹಾಗೂ ಇಂಗ್ಲಿಷ್ ವ್ಯಾಕರಣ ಕಲಿಕೋಪಕರಣಗಳು, ಸಾಮಾಜಿಕ ಸುಧಾರಕರ ಸಾಧನೆ ಸಹಿತ ವಿವರಣೆ, ಜಲವಿದ್ಯುತ್, ರಾಕೆಟ್ ಉಡಾವಣೆ ಮುಂತಾದ ಮಾದರಿಗಳ ಪ್ರದರ್ಶನ ಮತ್ತು ವಿವರಣೆ ಗಮನ ಸೆಳೆಯಿತು.

ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಶ್ರೀನಿವಾಸ್, ಉಪ ಪ್ರಾಂಶುಪಾಲೆ ಅನುರಾಧ, ಸಿ.ಆರ್.ಪಿ ಸೋಮಣ್ಣ, ಕೃಷ್ಣ, ಎಸ್.ಡಿ.ಎಂ.ಸಿ ಸದಸ್ಯರಾದ ಮಂಜು, ಆನಂದ್, ಶೋಭಾ, ಮುಖ್ಯ ಶಿಕ್ಷಕ ಕುಳ್ಳಯ್ಯ, ಶಿಕ್ಷಕರಾದ ಎಂ.ಪಿ.ಪ್ರದೀಪ್ ಕುಮಾರ್, ನಂದಕುಮಾರಿ, ತಿಮ್ಮಯ್ಯ, ಬೋರೇಗೌಡ, ಕಾತ್ಯಾಯಿನಿ, ಚಿಕ್ಕರಾಜು, ಶಶಿಕಲಾ, ಮೋನಿಷಾ, ಕೋಮಲಾ, ಶಿಲ್ಪಾ, ಪುಷ್ಪ, ದೀಪಿಕಾ ಭಾಗವಹಿಸಿದ್ದರು.

ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಆಯೋಜಿಸಿದ್ದ ಕಲಿಕೋಪಕರಣ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ವಿ.ಇ.ಉಮಾ ಮತ್ತು ಸಾರ್ವಜನಿಕರು ವಿದ್ಯಾರ್ಥಿಗಳು ತಯಾರಿಸಿದ್ದ ಕಲಿಕೋಪಕರಣ ಗಳನ್ನು ವೀಕ್ಷಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.