ADVERTISEMENT

ಕೆ.ಆರ್.ಪೇಟೆ: ರೈತ ಸಂಪರ್ಕ ಕೇಂದ್ರ ಸ್ಥಳಾಂತರಿಸದಿರಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:53 IST
Last Updated 15 ಸೆಪ್ಟೆಂಬರ್ 2025, 2:53 IST
<div class="paragraphs"><p>ಕೆ.ಆರ್.ಪೇಟೆ. ತಾಲ್ಲೂಕಿನ ತೆಂಡೇಕೆರೆಯಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಸ್ಥಳಾಂತರ ಮಾಡಬಾರದೆಂದು ಒತ್ತಾಯಿಸಿ&nbsp; ತೆಂಡೇಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರ ನೇತೃತ್ವದಲ್ಲಿ ಒತ್ತಾಯಿಸಲಾಯಿತು</p></div>

ಕೆ.ಆರ್.ಪೇಟೆ. ತಾಲ್ಲೂಕಿನ ತೆಂಡೇಕೆರೆಯಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಸ್ಥಳಾಂತರ ಮಾಡಬಾರದೆಂದು ಒತ್ತಾಯಿಸಿ  ತೆಂಡೇಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರ ನೇತೃತ್ವದಲ್ಲಿ ಒತ್ತಾಯಿಸಲಾಯಿತು

   

ಕೆ.ಆರ್.ಪೇಟೆ: ತಾಲ್ಲೂಕಿನ ತೆಂಡೇಕೆರೆಯಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಸ್ಥಳಾಂತರ ಮಾಡಬಾರದೆಂದು ಒತ್ತಾಯಿಸಿ ತೆಂಡೇಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರ ನೇತೃತ್ವದಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಮುಂದೆ ಹಕ್ಕೊತ್ತಾಯ ಮಂಡಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗು, ತೆಂಡೇಕೆರೆ ಗ್ರಾಮವು ಮೈಸೂರು –ಚನ್ನರಾಯಪಟ್ಟಣ ರಸ್ತೆಯಲ್ಲಿದ್ದು ವಾರದ ಸಂತೆಗೆ ಹೆಸರಾಗಿದೆ. ಸುಮಾರು 25 ಗ್ರಾಮಗಳಿಗೆ ಕೇಂದ್ರ ಸ್ಥಳವಾಗಿದೆ. ಮೈಸೂರು- ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿದ್ದು ರೈತರಿಗೆ ಉಪಯುಕ್ತವಾಗಲೆಂದು ಹತ್ತಾರು ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು ಜನೋಪಯೋಗಿಯಾಗಿದೆ. ಆದರೆ ಕೆಲವು ಮುಖಂಡರು ಹೋಬಳಿ ಕೇಂದ್ರವಾಗಿರುವ ಶೀಳನೆರೆ ಗ್ರಾಮಕ್ಕೆ ಇದನ್ನು ಸ್ಥಳಾಂತರ ಮಾಡುವಂತೆ ಕೃಷಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಮೇಲೆ ಒತ್ತಡ ತರುತ್ತಿರುವದು ಗಮನಕ್ಕೆ ಬಂದಿದೆ ಎಂದರು.

ADVERTISEMENT

ಕೇಂದ್ರಕ್ಕೆ ಕಟ್ಟಡ ಕಟ್ಟಲು ಜಮೀನನ್ನು ನೀಡಿದ್ದು, ಸಂಬಂಧಿತ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ ಕೃಷಿ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ತೆಂಡೇಕೆರೆ ಯಲ್ಲಿಯೇ ರೈತಸಂಪರ್ಕ ಕೇಂದ್ರವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ.ಅಧ್ಯಕ್ಷೆ ಸವಿತಾ ಇಂದ್ರೇಶ್, ಉಪಾಧ್ಯಕ್ಷೆ ನಾಗಾರತ್ನಮ್ಮ, ಪ್ರಮುಖರಾದ ರಂಗರಾಜು, ರಾಜು, ಜಯಮ್ಮ, ರೋಹಿಣಿ, ಬಸವರಾಜು, ಸದಣ್ಣ. ಈಶ್ವರ, ಕಾಯಿ ಕುಮಾರ, ಬಾಲು, ಅಣ್ಣಯ್ಯ ,ಧರ್ಮ, ಪ್ರಸನ್ನ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.