ADVERTISEMENT

ಗೆಜ್ಜಲಗೆರೆ  ಕೊಲೆ ಪ್ರಕರಣ: ಏಳು ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 3:52 IST
Last Updated 18 ಮೇ 2021, 3:52 IST

ಮದ್ದೂರು: ಮೇ 10ರಂದು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ಹೇಮಂತ್ ಕುಮಾರ್ ಎಂಬುವವರ ಕೊಲೆ ಪ್ರಕರಣವನ್ನು ಭೇದಿಸಿದ ಮದ್ದೂರು ಪೊಲೀಸರು, ಏಳು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಗೆಜ್ಹಲಗೆರೆಯ ಮನ್‌ಮುಲ್‌ಗೆ ಕ್ಯಾಂಟರ್‌ ಬಾಡಿಗೆ ಬಿಡುವ ಸಂಬಂಧವಾಗಿ 2 ಗುಂಪಿನ ನಡುವೆ ದ್ವೇಷ ಏರ್ಪಟ್ಟು ಹಾಲಿನ ಒಕ್ಕೂಟದ ಕಚೇರಿ ಮುಂದೆ ಗೆಜ್ಜಲಗೆರೆಯ ಹೇಮಂತ್ ಕುಮಾರ್‌ನ ಬೈಕ್‌ಗೆ ಕಾರು ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಂತರ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದರು.

ಪ್ರಕರಣವನ್ನು ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್ ನೇತೃತ್ವದಲ್ಲಿ ಮದ್ದೂರಿನ ಸಿ.ಪಿ.ಐ ಭರತ್ ಗೌಡ, ಪಿ.ಎಸ್.ಐ ನವೀನ್ ಗೌಡ ಜಾಲ ಬೀಸಿ ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ಗೇಟ್ ಬಳಿ ಆರೋಪಿಗಳಾದ ಇಂದುಕುಮಾರ್, ಮಧು, ನಾಗರಾಜು, ಪ್ರಸಾದ್, ಸ್ವರೂಪ್ ಗೌಡ, ಮಹದೇವು ಹಾಗೂ ಅವಿನಾಶ್ ಎಂಬುವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು 3 ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.