ಸಾವು
ಪ್ರಾತಿನಿಧಿಕ ಚಿತ್ರ
ಹಲಗೂರು: ಸಮೀಪದ ಮಾರಗೌಡನಹಳ್ಳಿಯಲ್ಲಿ ಬಾಲಕಿಗೆ ಮೇಕೆ ತಿವಿದು ಶನಿವಾರ ಸಾವನ್ನಪ್ಪಿದ್ದಾಳೆ.
ಮಂಡ್ಯದ ನಾಲಬಂದವಾಡಿ ಮುಸ್ಲಿಂ ಬ್ಲಾಕ್ ನಿವಾಸಿ ಸುಂದ್ರಮ್ಮ ಮತ್ತು ದಿನೇಶ್ ರವರ ಪುತ್ರಿ ಸೋಫಿಯಾ (7) ಮೃತ ಬಾಲಕಿ.
ಗ್ರಾಮದ ಹೊರವಲಯದ ತೋಟದ ಮನೆಗೆ ಕುಟುಂಬದವರ ಜೊತೆ ಬಂದಿದ್ದ ಸೋಫಿಯಾ, ಸಹೋದರರ ಜೊತೆ ಆಟವಾಡುತ್ತಿದ್ದಳು. ಶುಕ್ರವಾರ ಸಂಜೆಯ ವೇಳೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆ ಸೋಫಿಯಾ ಎಡಪಕ್ಕೆಗೆ ಬಲವಾಗಿ ಗುದ್ದಿದೆ. ಗಾಯಗೊಂಡ ಸೋಫಿಯಾಳಿಗೆ ತುರ್ತು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸೋಫಿಯಾ ಮೃತಪಟ್ಟಿದ್ದಾಳೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.