ADVERTISEMENT

ಮಳವಳ್ಳಿ | ಚಿನ್ನಾಭರಣ, ನಗದು ಕಳವು

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:35 IST
Last Updated 27 ಜುಲೈ 2025, 4:35 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಮಳವಳ್ಳಿ: ಅಮೃತೇಶ್ವರನಹಳ್ಳಿ ಗ್ರಾಮದಲ್ಲಿ ಮನೆಯ ಬಾಗಿಲ ಬೀಗ ಒಡೆದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಕಳ್ಳರು ಮೂರು ಮೇಕೆಗಳನ್ನೂ ಕಳವು ಮಾಡಿದ್ದಾರೆ.

ಗ್ರಾಮದ ಚನ್ನಾಜಮ್ಮ ಎಂಬವರು ಶುಕ್ರವಾರ ತಮ್ಮ ತಂದೆಯ ಅನಾರೋಗ್ಯ ಕಾರಣ ಕೆಂಬೂತಗೆರೆಗೆ ತೆರಳಿದ್ದರು. ಈ ವೇಳೆ  ಕಳ್ಳರು ಮನೆಗೆ ನುಗ್ಗಿ ಬೀರುವಿನಲ್ಲಿದ್ದ 16 ಗ್ರಾಂ ಚಿನ್ನಾಭರಣ, ₹25 ಸಾವಿರ ನಗದು ದೋಚಿದ್ದಾರೆ.  ಕೊಟ್ಟಿಗೆಯಲ್ಲಿದ್ದ ₹15 ಸಾವಿರ ಮೌಲ್ಯದ 3 ಮೇಕೆಗಳನ್ನು ಕದ್ದಿದ್ದಾರೆ. ಶನಿವಾರ ಬೆಳಿಗ್ಗೆ ಚನ್ನಾಜಮ್ಮ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT