
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಬಳಿಯ ಕೊದೇನಕೊಪ್ಪಲು-ಮಾರ್ಕಾಲು ರಸ್ತೆಯಲ್ಲಿ ಗುರುವಾರ ಗೂಡ್ಸ್ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ತಿ.ನರಸೀಪುರ ತಾಲ್ಲೂಕಿನ ಬನ್ನೂರಿನ ಸಾನಿಯಾಮತ್(24) ಮತ್ತು ಮಹಮದ್ ತೌಸೀಫ್(25) ಮೃತಪಟ್ವರು. ಗುರುವಾರ ಬೆಳಿಗ್ಗೆ ಮೂವರು ಕೂಲಿ ಕಾರ್ಮಿಕರೊಂದಿಗೆ ಬನ್ನೂರಿನಿಂದ ಕಿರುಗಾವಲು ಗ್ರಾಮದಲ್ಲಿನ ಅಕ್ಕಿಮಿಲ್ ಅಕ್ಕಿಯನ್ನು ತುಂಬಿಕೊಂಡು ಬರಲು ಹೋಗಿದ್ದಾಗ ಅಪಘಾತ ಸಂಭವಿದೆ. ಚಾಲಕ ಮತ್ತು ಟೆಂಪೊದಲ್ಲಿದ್ದ ಮತ್ತೊಬ್ಬ ಕೂಲಿ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಚಾಲಕ ಮತ್ತು ರೈಸ್ ಮಿಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.