ADVERTISEMENT

ಬೆಳಕವಾಡಿ | ‘ಹಳೆಯ ವಿದ್ಯಾರ್ಥಿಗಳ ಸೇವೆಯಿಂದ ಶಾಲೆ ಅಭಿವೃದ್ಧಿ’

ಹೊಸದೊಡ್ಡಿ: ಹೊಂಗಿರಣ ಪ್ರತಿಷ್ಠಾನದಿಂದ ₹ 70 ಲಕ್ಷದಲ್ಲಿ ಸರ್ಕಾರಿ ಶಾಲೆ ಕಟ್ಟಡ

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:30 IST
Last Updated 25 ಮೇ 2025, 15:30 IST
ಬೆಳಕವಾಡಿ ಸಮೀಪದ ಹೊಸದೊಡ್ಡಿ ಗ್ರಾಮದ ನೂತನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕಾರ್ಯಕ್ರಮದ ಉದ್ಘಾಟನೆಯನ್ನು ಸೌಮ್ಯನಾಥ ಸ್ವಾಮೀಜಿ ನೆರವೇರಿಸಿದರು. ಪುಟ್ಟಸ್ವಾಮಿ, ಉಮಾ, ಶ್ರೀನಿವಾಸ್, ಮಹದೇವ್, ಬನಶಂಕರಿ ಇದ್ದಾರೆ.
ಬೆಳಕವಾಡಿ ಸಮೀಪದ ಹೊಸದೊಡ್ಡಿ ಗ್ರಾಮದ ನೂತನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕಾರ್ಯಕ್ರಮದ ಉದ್ಘಾಟನೆಯನ್ನು ಸೌಮ್ಯನಾಥ ಸ್ವಾಮೀಜಿ ನೆರವೇರಿಸಿದರು. ಪುಟ್ಟಸ್ವಾಮಿ, ಉಮಾ, ಶ್ರೀನಿವಾಸ್, ಮಹದೇವ್, ಬನಶಂಕರಿ ಇದ್ದಾರೆ.   

ಬೆಳಕವಾಡಿ: ‘ಮಕ್ಕಳಿಗೆ ವಿದ್ಯಾಭ್ಯಾಸದ ಜತಗೆ ಗುರು ಹಿರಿಯರ ಬಗ್ಗೆ ಸಂಸ್ಕಾರ ಬೇಕು, ಗೌರವ, ಸಂಸ್ಕಾರ ಇರುವ ವಿದ್ಯೆಯನ್ನು ಕೊಟ್ಟರೆ ಸಮಾಜದಲ್ಲಿ ಮಕ್ಕಳು ಉತ್ತಮವಾಗಿ ಬೆಳೆದು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ’ ಎಂದು ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಪೀಠಾಧಿಪತಿ ಸೌಮ್ಯನಾಥ ಸ್ವಾಮೀಜಿ ತಿಳಿಸಿದರು.

ಬೆಳಕವಾಡಿ ಸಮೀಪದ ಹೊಸದೊಡ್ಡಿ ಗ್ರಾಮದಲ್ಲಿ ಹೊಂಗಿರಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸುಮಾರು ₹ 70 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಮನುಷ್ಯನಿಗೆ ಜ್ಞಾನ, ಸಂತೋಷ, ಜೀವನವನ್ನು ಕೊಡುತ್ತದೆ. ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಓದಿದವರೆ ದೊಡ್ಡ ಉನ್ನತ ಹುದ್ದೆಗಳಲ್ಲಿದ್ದಾರೆ. ಗ್ರಾಮದಲ್ಲಿ ಹುಟ್ಟಿ ಬೆಳೆದು ದೆಹಲಿಯಲ್ಲಿ ಪೊಲೀಸ್ ಉದ್ಯೋಗದಲ್ಲಿ ಇದ್ದುಕೊಂಡು ಗ್ರಾಮದ ಬಗ್ಗೆ ಅಭಿಮಾನ, ಗೌರವ, ಪ್ರೀತಿ, ಸೇವಾಭಾವನೆಯಿಂದ ಸಂಸ್ಥೆ ಕಟ್ಟಿ ಅದರ ಮೂಲಕ ತಮ್ಮದೇ ಜಾಗದಲ್ಲಿ ಶಾಲೆ ನಿರ್ಮಿಸಿ ಕೊಟ್ಟಿರುವ ಶಾಲೆಯ ಹಳೆಯ ವಿದ್ಯಾರ್ಥಿ ಮಹದೇವ್ ಹಾಗೂ ಅವರ ತಂಡದ ಕಾರ್ಯಕ್ಕೆ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

ADVERTISEMENT

ಹಿರಿಯ ಹೊಂಗಿರಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಮಹದೇವ್ ಮಾತನಾಡಿ, ‘ಮುಂದೆ ಈ ಶಾಲೆಗೆ ಮಕ್ಕಳು ಹೆಚ್ಚು ಪ್ರವೇಶ ಪಡೆದಾಗ ಹೆಚ್ಚುವರಿ ಕೊಠಡಿಗಳನ್ನು ಕಟ್ಟಿಸಿ, ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇನೆ, ಗ್ರಾಮೀಣ ಭಾಗದ ಜನರ ಕಾಳಜಿಯಿಂದ ಆರೋಗ್ಯ ಶಿಬಿರ ನಡೆಸುವುದು ಹಾಗೆಯೇ ಆಸ್ಪತ್ರೆ, ಪ್ರೌಢಶಾಲೆ ನಿರ್ಮಿಸಲಾಗುವುದು’ ಎಂದರು.

ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ‘2019ರಲ್ಲಿ ಶಾಸಕನಾಗಿದ್ದಾಗ ಈ ಶಾಲೆಗೆಭೂಮಿ ಪೂಜೆ ಮಾಡಿ, ಶಾಸಕರ ಅನುದಾನದಿಂದ ₹ 5 ಲಕ್ಷ ಕೊಟ್ಟಿದ್ದೇನೆ. ಶಿಕ್ಷಣ ನಮ್ಮ ಮೂಲ ಹಕ್ಕು, ಸೌಕರ್ಯಗಳ ಕೊರತೆ ಇರುವುದರಿಂದ ಅವುಗಳನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಒತ್ತಾಯ ಮಾಡುತ್ತಿದ್ದೇನೆ’ ಎಂದರು.

ಹೊಸದೊಡ್ಡಿ ಗ್ರಾಮದ ಮುಖ್ಯದ್ವಾರದಿಂದ ಸೌಮ್ಯನಾಥ ಸ್ವಾಮೀಜಿ ಅವರನ್ನು ಸ್ವಾಗತಿಸಿ ಜಾನಪದ ಕಲಾ ತಂಡ ಹಾಗೂ ಪೂರ್ಣಕುಂಭ ಮೆರವಣಿಗೆಯೊಂದಿಗೆ ಶಾಲಾ ಕಟ್ಟಡದವರೆಗೆ ಕರೆ ತರಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮಳವಳ್ಳಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಅಕ್ಷರ ದಾಸೋಹ ನಿರ್ದೇಶಕ ಮಹದೇವ, ಅತಿಥಿ ಉಪನ್ಯಾಸಕ ಸಂಗಪ್ಪ ವಗ್ಗರ್, ಟ್ರಸ್ಟ್ ಅಧ್ಯಕ್ಷ ಮಹದೇವ್, ಸದಸ್ಯರಾದ ದಿಲೀಪ್, ಸಂದೀಪ್, ಅರುಣ್ ಕುಮಾರ್, ನಾಗೇಶ್, ಆಶಾಲತಾ, ಮಂಜುಳಾ, ಮುಖ್ಯ ಶಿಕ್ಷಕಿ ಬನಶಂಕರಿ, ಸಹ ಶಿಕ್ಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಇನ್ನಷ್ಟು ಸೌಲಭ್ಯಕ್ಕೆ ಸಚಿವರಿಗೆ ಮನವಿ ಜಾನಪದ ಕಲಾ ತಂಡಗಳೊಂದಿಗೆ ಸ್ವಾಮೀಜಿ ಮೆರವಣಿಗೆ

‘ಮಕ್ಕಳ ಸಂಖ್ಯೆ ಹೆಚ್ಚಲು ಸಹಕರಿಸಿ’ ಕ್ಷೇತ್ರ ಶಿಕ್ಷಣಾಧಿಕಾರಿ ಈ.ವಿ. ಉಮಾ ಮಾತನಾಡಿ ‘ಶಾಲೆಯಲ್ಲಿ 18 ಮಕ್ಕಳು ಇದ್ದಾರೆ. ಅದನ್ನು 81 ಆಗುವಂತೆ ಪೋಷಕರು ಸಹಕಾರ ಮಾಡಬೇಕು. ಮಕ್ಕಳು ಹೆಚ್ಚಾದರೆ ಬೇಡಿಕೆಯಂತೆ ಇಂಗ್ಲಿಷ್ ಮಾಧ್ಯಮವನ್ನು ತರಿಸುವಂತಹ ಕೆಲಸ ಮಾಡಲಾಗುವುದು ಮಹದೇವ್ ತಂಡದವರು ಮಕ್ಕಳಿಗೆ ಉತ್ತಮ ಸುಸಜ್ಜಿತವಾದ ಕಟ್ಟಡ ಡೆಸ್ಕ್ ಬೆಂಚ್ ಹಾಗೂ ಪರಿಕರಗಳ ಸಮೇತ ಕೊಟ್ಟಿದ್ದಾರೆ. ಅದನ್ನು ನಾವು ಉಳಿಸಿ ಬೆಳೆಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.