ADVERTISEMENT

ಹಲಗೂರು: ನ್ಯಾಷನಲ್ ಟ್ರಸ್ಟ್ ಅಫ್ ಇಂಡಿಯಾ ಟ್ರಸ್ಟ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2023, 13:38 IST
Last Updated 2 ಜುಲೈ 2023, 13:38 IST
ಹಲಗೂರಿನ ಕುಬಾ ಮಸೀದಿಯ ಕಾಂಪ್ಲೆಕ್ಸ್ ನಲ್ಲಿ 'ನ್ಯಾಷನಲ್ ಟ್ರಸ್ಟ್ ಅಫ್ ಇಂಡಿಯಾ' ಕಚೇರಿಯ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ವಕೀಲರಾದ ಕೆಂಪರಾಜು, ಡಿ.ಬಿ.ಲಿಂಗಣ್ಣಯ್ಯ, ಮುಖಂಡರಾದ ಶಂಷುದ್ದೀನ್, ನಿಸಾರ್ ಅಹಮದ್, ಶಿವಕುಮಾರ್, ಅಕ್ರಂ ಉಲ್ಲಾ, ಕೊನ್ನಾಪುರ ಜಯಶಂಕರ್, ಟ್ರಸ್ಟ್ ಅದ್ಯಕ್ಷೆ ಫಾತಿಮಾ ಸೇರಿದಂತೆ ಹಲವರು ಇದ್ದರು.
ಹಲಗೂರಿನ ಕುಬಾ ಮಸೀದಿಯ ಕಾಂಪ್ಲೆಕ್ಸ್ ನಲ್ಲಿ 'ನ್ಯಾಷನಲ್ ಟ್ರಸ್ಟ್ ಅಫ್ ಇಂಡಿಯಾ' ಕಚೇರಿಯ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ವಕೀಲರಾದ ಕೆಂಪರಾಜು, ಡಿ.ಬಿ.ಲಿಂಗಣ್ಣಯ್ಯ, ಮುಖಂಡರಾದ ಶಂಷುದ್ದೀನ್, ನಿಸಾರ್ ಅಹಮದ್, ಶಿವಕುಮಾರ್, ಅಕ್ರಂ ಉಲ್ಲಾ, ಕೊನ್ನಾಪುರ ಜಯಶಂಕರ್, ಟ್ರಸ್ಟ್ ಅದ್ಯಕ್ಷೆ ಫಾತಿಮಾ ಸೇರಿದಂತೆ ಹಲವರು ಇದ್ದರು.   

ಹಲಗೂರು: ಇಲ್ಲಿನ ಕನಕಪುರ ರಸ್ತೆಯಲ್ಲಿರುವ ಕುಬಾ ಮಸೀದಿಯ ಕಾಂಪ್ಲೆಕ್ಸ್ ನಲ್ಲಿ 'ನ್ಯಾಷನಲ್ ಟ್ರಸ್ಟ್ ಅಫ್ ಇಂಡಿಯಾ' ಕಚೇರಿಯ ಉದ್ಘಾಟನಾ ಸಮಾರಂಭ ನಡೆಯಿತು.

ವಕೀಲ ಕೆಂಪರಾಜು ಮಾತನಾಡಿ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಆರಂಭಿಸಿರುವ ಟ್ರಸ್ಟ್ ಮೂಲಕ, ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಅಯೋಜಿಸಿ, ಸ್ವ ಉದ್ಯೋಗಕ್ಕೆ ಉತ್ತೇಜಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಉಳ್ಳವರು ಮತ್ತು ಇಲ್ಲದವರ ನಡುವೆ ಕೊಂಡಿಯಾಗಿ ಕೆಲಸ ಮಾಡಿದಾಗ ಹಿಂದುಳಿದ ಸಮುದಾಯದ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.

ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಡಿ.ಬಿ.ಲಿಂಗಣ್ಣಯ್ಯ ಮಾತನಾಡಿ ಉತ್ತಮ ಸದುದ್ದೇಶದಿಂದ ಟ್ರಸ್ಟ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪದಾಧಿಕಾರಿಗಳು ನಿರಂತರವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಹಿಳೆಯರು, ಯುವಜನರು ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ADVERTISEMENT

ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ಹೊಲಿಗೆ ತರಬೇತಿ, ಯುವಕ ಯುವತಿಯರಿಗೆ ಕಂಪ್ಯೂಟರ್ ತರಬೇತಿ ನೀಡಲಾಗುವುದು. ಮಹಿಳೆಯರು ಮತ್ತು ಯುವಜನರ ಸಬಲೀಕರಣಕ್ಕೆ ಶ್ರಮಿಸಲಾಗುವುದು ಎಂದು ಟ್ರಸ್ಟ್ ಅದ್ಯಕ್ಷೆ ಫಾತಿಮಾ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಕೀಲರಾದ ಕೆಂಪರಾಜು, ದಡಮಹಳ್ಳಿ ಡಿ.ಬಿ.ಲಿಂಗಣ್ಣಯ್ಯ, ಮುಖಂಡರಾದ ಶಂಷುದ್ದೀನ್, ನಿಸಾರ್ ಅಹಮದ್, ಶಿವಕುಮಾರ್, ಅಕ್ರಂ ಉಲ್ಲಾ, ಕೊನ್ನಾಪುರ ಜಯಶಂಕರ್, ಟ್ರಸ್ಟ್ ಅದ್ಯಕ್ಷೆ ಫಾತಿಮಾ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.