ಹಲಗೂರು:ವಿದ್ಯುತ್ ಕಂಬ ಬದಲಾವಣೆ ಕೆಲಸದಲ್ಲಿ ನಿರತನಾಗಿದ್ದ ಸೆಸ್ಕ್ ಸಿಬ್ಬಂದಿ ಕುಲುಮೆದೊಡ್ಡಿ ಗ್ರಾಮದ ಅಲೆಮನೆ ತಮ್ಮಯ್ಯ ಅವರ ಪುತ್ರ ಟಿ.ಅನಿಲ್ (30) ಭಾನುವಾರ ಆಯತಪ್ಪಿ ಕಂಬದಿಂದ ಬಿದ್ದು ಮೃತಪಟ್ಟಿದ್ದಾರೆ.
ಸೆಸ್ಕ್ ಮಳವಳ್ಳಿ ಉಪ ವಿಭಾಗದ ಹಾಡ್ಲಿ ಶಾಖೆಯಲ್ಲಿ ಲೈನ್‌ಮನ್ ಆಗಿದ್ದ ಅನಿಲ್, ಡಿ.ಹಲಸಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬ ಬದಲಾಯಿಸುವ ಕೆಲಸದದಲ್ಲಿ ನಿರತನಾಗಿದ್ದಾಗ ಬಿದ್ದು ತೀವ್ರ ಗಾಯಗೊಂಡಿದ್ದರು. ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.