ADVERTISEMENT

ಸಂತೇಬಾಚಹಳ್ಳಿ: ಹೇಮಾವತಿ ನಾಲೆಯಲ್ಲಿ ನೀರು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:58 IST
Last Updated 4 ಡಿಸೆಂಬರ್ 2025, 6:58 IST
ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಸೇತುವೆ ಬಳಿ ಹೇಮಾವತಿ ನಾಲೆಯಲ್ಲಿ ನೀರು ಹೆಚ್ಚಾಗಿರುವ ಕಾರಣ ನೀರು ಹೊರ ಬೀಳುತ್ತಿರುವುದು.
ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಸೇತುವೆ ಬಳಿ ಹೇಮಾವತಿ ನಾಲೆಯಲ್ಲಿ ನೀರು ಹೆಚ್ಚಾಗಿರುವ ಕಾರಣ ನೀರು ಹೊರ ಬೀಳುತ್ತಿರುವುದು.   

ಸಂತೇಬಾಚಹಳ್ಳಿ: ಇಲ್ಲಿನ ಸಾರಂಗಿ ಬಳಿ ಹಾದು ಹೋಗಿರುವ ಹೇಮಾವತಿ ಎಡದಂಡ ನಾಲೆಯಲ್ಲಿ ಇದ್ದಕ್ಕಿದ್ದಂತೆ ನೀರು ಹೆಚ್ಚಾಗಿದೆ.

ಇಲ್ಲಿನ ಶ್ಯಾರಹಳ್ಳಿ ಹಾಗೂ ಸಾರಂಗಿ ನಡುವೆ ಇರುವ ಹೇಮಾವತಿ ನಾಲೆಯಲ್ಲಿ ಮಂಗಳವಾರ ಸಂಜೆ ನೀರು ಹೆಚ್ಚಾಗಿ ಹರಿದು ಬಂದಿದೆ. ಇ ಕಾರಣದಿಂದಾಗಿ ಕಿರಿದಾದ ಸೇತುವೆಯಲ್ಲಿ ನೀರು ಹರಿಯಲು ಸಾಧ್ಯವಾಗದ ಕಾರಣ, ತಗ್ಗು ಪ್ರದೇಶದಲ್ಲಿ ನೀರು ಹೊರ ಹೋಗಿ ಏರಿ ಒಡೆಯುವ ಸಾಧ್ಯತೆ ಇತ್ತು. ಕೂಡಲೆ ಸ್ಥಳೀಯರು ಹಾಗೂ ಗ್ರಾಮಸ್ಥರು ಹೇಮಾವತಿ ಇಲಾಖೆಗೆ ಮಾಹಿತಿ ನೀಡಿದರು. ಹೇಮಾವತಿ ಇಲಾಖೆಯ ಕಿಕ್ಕೇರಿ ವಿಭಾಗದ ಎಂಜಿನಿಯರ್ ಚಂದ್ರೇಗೌಡ, ನೀರು ಕಡಿಮೆ ಪ್ರಮಾಣದಲ್ಲಿ ಹೊರ ಬಿಡಲು ಸೂಚನೆ ನೀಡಲಾಗಿದೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT