ADVERTISEMENT

ಕಿಕ್ಕೇರಿ | ಜೇನುಹುಳು ದಾಳಿ: ಕೆಲವರಿಗೆ ಸಣ್ಣಪುಟ್ಟ ಗಾಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 13:24 IST
Last Updated 25 ಜನವರಿ 2025, 13:24 IST
ಕಿಕ್ಕೇರಿಯ ಕರ್ಣಾಟಕ ಬ್ಯಾಂಕ್ ಕಟ್ಟಡದಲ್ಲಿ ಕಟ್ಟಿದ್ದ ಜೇನುಗೂಡಿನ ಜೇನುನೊಣಗಳು ಒಮ್ಮೆಲೆ ಹಾರಾಡಿದ್ದರಿಂದ ಸ್ಥಳೀಯರು ಆತಂಕಗೊಂಡರು
ಕಿಕ್ಕೇರಿಯ ಕರ್ಣಾಟಕ ಬ್ಯಾಂಕ್ ಕಟ್ಟಡದಲ್ಲಿ ಕಟ್ಟಿದ್ದ ಜೇನುಗೂಡಿನ ಜೇನುನೊಣಗಳು ಒಮ್ಮೆಲೆ ಹಾರಾಡಿದ್ದರಿಂದ ಸ್ಥಳೀಯರು ಆತಂಕಗೊಂಡರು   

ಕಿಕ್ಕೇರಿ: ಪಟ್ಟಣದ ರಾಜ್ಯ ಹೆದ್ದಾರಿ ಬಳಿ ಕರ್ಣಾಟಕ ಬ್ಯಾಂಕ್ ಕಟ್ಟಡದಲ್ಲಿ ಕಟ್ಟಿದ್ದ ಜೇನುಗೂಡಿನ ಜೇನು ನೊಣಗಳು ಶನಿವಾರ ಕೆಲವರಿಗೆ ಕಚ್ಚಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಈ ಕಟ್ಟಡದ ಸುತ್ತ ಹಾರಾಡಲು ಆರಂಭಿಸಿದ್ದರಿಂದ ಸ್ಥಳೀಯರು ಆತಂಕದಿಂದ ಓಡಲಾರಂಭಿಸಿದರು. ಕೆಲವರು ರಕ್ಷಣೆಗಾಗಿ ತಮ್ಮಲ್ಲಿದ್ದ ಕರವಸ್ತ್ರ, ಬಟ್ಟೆಗಳನ್ನು ಬಳಸಿದರು. ಇದೇ ಕಟ್ಟಡದಲ್ಲಿ ಮುತ್ತೂಟ್ ಫೈನಾನ್ಸ್ ಸಂಸ್ಥೆ ಇದ್ದು, ಶನಿವಾರ ರಜೆ ಇದ್ದಿದ್ದರಿಂದ ಹೆಚ್ಚಿನ ಅವಘಡ ಸಂಭವಿಸಲಿಲ್ಲ.

ಕೆಲ ಯುವಕರು ಧೈರ್ಯ ಮಾಡಿ ಜೇನುಗೂಡು ಬಿಚ್ಚಿದರು. ಜೇನುತುಪ್ಪ ಹಾಗೂ ಮೇಣ ಬೇರ್ಪಡಿಸಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.