ADVERTISEMENT

ವೈದ್ಯನಾಥಪುರದಲ್ಲಿ ಮನೆಗೆ ಬೆಂಕಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 13:05 IST
Last Updated 23 ಏಪ್ರಿಲ್ 2024, 13:05 IST
ಮದ್ದೂರು ತಾಲ್ಲೂಕಿನ ವೈದ್ಯನಾಥಪುರದಲ್ಲಿ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಹೆಂಚಿನ ಮನೆಗೆ ಬೆಂಕಿ ತಗುಲಿ ನಷ್ಟ ಉಂಟಾಗಿದೆ
ಮದ್ದೂರು ತಾಲ್ಲೂಕಿನ ವೈದ್ಯನಾಥಪುರದಲ್ಲಿ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಹೆಂಚಿನ ಮನೆಗೆ ಬೆಂಕಿ ತಗುಲಿ ನಷ್ಟ ಉಂಟಾಗಿದೆ   

ಮದ್ದೂರು: ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ನಾಡ ಹೆಂಚಿನ ಮನೆ ಮಂಗಳವಾರ ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿಗೆ ಅಹುತಿಯಾಗಿದೆ.

ರತ್ನಮ್ಮ ಅವರಿಗೆ ಇಬ್ಬರು ಗಂಡುಮಕ್ಕಳಿದ್ದು, ಒಂದೇ ಮನೆ ಮನೆಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಮಂಗಳವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ಸುಮಾರು ಬೆಳಿಗ್ಗೆ 10ಕ್ಕೆ ರೆಫ್ರಿಜರೇಟರ್‌ ಬೆಂಕಿ ಹತ್ತಿಕೊಂಡು ಉರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮನೆಯ ಶೇಕಡಾ 70 ಭಾಗ ನಾಶವಾಗಿದೆ.

ಮನೆಯಲ್ಲಿದ್ದ ₹10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.

ADVERTISEMENT

ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮಸ್ಥರ ಸಹಾಯದಿಂದ ಅಗ್ನಿ ನಂದಿಸುವ ಕೆಲಸ ಮಾಡಿದರು. ಅಷ್ಟರಲ್ಲಿ ಚಾವಣಿ ಹಾಗೂ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದವು. ರತ್ನಮ್ಮ ಅವರ ಪುತ್ರ ಶ್ಯಾಮ್ ಅವರು ಮದ್ದೂರು ಪೋಲೀಸ್ ಠಾಣೆಯಲ್ಲಿ ಅಗ್ನಿ ಅವಘಡ ಸಂಬಂಧ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.