ADVERTISEMENT

ಮದ್ದೂರಿನಲ್ಲಿ ಇಂದು ಬೃಹತ್ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:25 IST
Last Updated 30 ಜನವರಿ 2026, 5:25 IST
ಮದ್ದೂರಿನಲ್ಲಿ ಬಿಜೆಪಿ ಮುಖಂಡ ಎಸ್.ಪಿ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರ ಸಭೆ ನಡೆಯಿತು. ಗುರುಸ್ವಾಮಿ, ನೈದಿಲೆ ಚಂದ್ರು ಪಾಲ್ಗೊಂಡಿದ್ದರು
ಮದ್ದೂರಿನಲ್ಲಿ ಬಿಜೆಪಿ ಮುಖಂಡ ಎಸ್.ಪಿ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರ ಸಭೆ ನಡೆಯಿತು. ಗುರುಸ್ವಾಮಿ, ನೈದಿಲೆ ಚಂದ್ರು ಪಾಲ್ಗೊಂಡಿದ್ದರು   

ಮದ್ದೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಾಗೂ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಜ.30ರಂದು ನಗರದಲ್ಲಿ ಬೃಹತ್ ಹಿಂದು ಸಮಾಜೋತ್ಸವ ಮತ್ತು ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮನ್ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ವಿವಿಧ ಹಿಂದೂ ಪರ ಸಂಘಟನೆ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದಲ್ಲಿ ನಡೆಯಲಿರುವ ಹಿಂದು ಸಮಾಜೋತ್ಸವ ಹಾಗೂ ಶೋಭಾಯಾತ್ರೆಯಲ್ಲಿ ಪ್ರತಿ ಕುಟುಂಬ, ಸಂಘ, ಸಂಸ್ಥೆಗಳು  ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ADVERTISEMENT

ಶೋಭಾಯಾತ್ರೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದ್ದು, ಸಂಜೆ 3.30ಕ್ಕೆ ಪ್ರವಾಸಿ ಮಂದಿರದಿಂದ ಬೃಹತ್ ಶೋಭಾಯತ್ರೆ ಹೊರಟು ನಗರದ ಪ್ರಮುಖ ಬೀದಿಯಲ್ಲಿ ಮರಣಿಗೆ ಮುಖಾಂತರ ಹಳೆಯ ಬಸ್ ನಿಲ್ದಾಣಕ್ಕೆ ಬರಲಾಗುವುದು ಎಂದ ಅವರು ಸಂಜೆ 4.30 ರ ನಂತರ ಸಭಾ ಕಾರ್ಯಕ್ರಮ ಹಳೆಯ ಬಸ್ ನಿಲ್ದಾಣದಲ್ಲಿ ನಡೆಯಲಿದೆ ಎಂದರು.

ಹಿಂದು ಸಮಾಜೋತ್ಸವ ಮತ್ತು ಶೋಭಾಯಾತ್ರೆಯ ಸಾನ್ನಿಧ್ಯವನ್ನು ಎಸ್.ಐ.ಹೊನ್ನಗೆರೆಯ ಶ್ರೀ ಶಿವಕ್ಷೇತ್ರ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿಲಿದ್ದಾರೆ ಎಂದರು.

ಸಭೆಯಲ್ಲಿ ವಿವಿಧ ಹಿಂದು ಪರ ಸಂಘಟನೆಗಳ ಮುಖಂಡರಾದ ಗುರುಸ್ವಾಮಿ, ನೈದಿಲೆ ಚಂದ್ರು, ಅವಿನಾಶ್, ಅರವಿಂದ್, ಜಗನ್ನಾಥ್, ಎಂ.ಸಿ.ಸಿದ್ದು, ವೀರಭದ್ರಸ್ವಾಮಿ, ಕೆ.ಜಿ.ಗುರುಮಲ್ಲೇಶ್, ಮಧು, ಸುಧಾಕರ್, ಮನು, ಶಿವು, ಅಭಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.