ADVERTISEMENT

ರಾಜಕೀಯ ನಿರ್ಧಾರ; ಯೋಚನೆ ಅಗತ್ಯ- ಎನ್‌.ಚಲುವರಾಯಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 2:50 IST
Last Updated 21 ಫೆಬ್ರುವರಿ 2022, 2:50 IST
ಪಾಂಡವಪುರದಲ್ಲಿ ಮಾಜಿ ಶಾಸಕ ಡಿ.ಹಲಗೇಗೌಡ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಮಂಜುನಾಥ್, ಎಚ್‌.ತ್ಯಾಗರಾಜು ಅವರನ್ನು ಅಭಿನಂದಿಸಲಾಯಿತು. ಎನ್.ಚಲುವರಾಯಸ್ವಾಮಿ.ಎನ್.ಕೃಷ್ಣೇಗೌಡ, ರವಿಬೋಜೇಗೌಡ ಇದ್ದಾರೆ
ಪಾಂಡವಪುರದಲ್ಲಿ ಮಾಜಿ ಶಾಸಕ ಡಿ.ಹಲಗೇಗೌಡ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಮಂಜುನಾಥ್, ಎಚ್‌.ತ್ಯಾಗರಾಜು ಅವರನ್ನು ಅಭಿನಂದಿಸಲಾಯಿತು. ಎನ್.ಚಲುವರಾಯಸ್ವಾಮಿ.ಎನ್.ಕೃಷ್ಣೇಗೌಡ, ರವಿಬೋಜೇಗೌಡ ಇದ್ದಾರೆ   

ಪಾಂಡವಪುರ: ಮಂಡ್ಯ ಜಿಲ್ಲೆಯು ಹಲವು ವರ್ಷಗಳಿಂದಲೂ ತಬ್ಬಲಿತನವನ್ನು ಅನುಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ ಯೋಚಿಸಿ ಒಳ್ಳೆಯ ರಾಜಕೀಯ ನಿರ್ಧಾ ತೆಗೆದುಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಾಜಿ ಶಾಸಕ ದಿ.ಡಿ.ಹಲಗೇಗೌಡ ಅವರ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ‍ಂಚಾಯಿತಿ ಮಾಜಿ ಸದಸ್ಯರಾದ ಎಚ್.ಮಂಜುನಾಥ್ ಮತ್ತು ಎಚ್.ತ್ಯಾಗರಾಜು ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಜಿಲ್ಲೆಯ ಜನರು ರಾಜಕೀಯವಾಗಿ ಪರಿವರ್ತನೆಗೊಂಡರೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ಚಿತ್ರಣವೇ ಬದಲಾಗಲಿದೆ. ಜಿಲ್ಲೆಯ‌ಲ್ಲೂ ಕಾಂಗ್ರೆಸ್ ಪಾರುಪತ್ಯ ಸ್ಥಾಪಿಸಲಿದೆ ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ಡಿ.ಹಲಗೇ ಗೌಡ ಅವರು ಮುತ್ಸದ್ಧಿ ರಾಜಕಾರಣಿ ಯಾಗಿದ್ದವರು. ಅವರ ಪುತ್ರರಾದ ಎಚ್.ಮಂಜುನಾಥ್ ಮತ್ತು ಎಚ್.ತ್ಯಾಗರಾಜು ತಮ್ಮ ತಂದೆಯಂತೆ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ರಾಜಕೀಯ ಬದಲಾವಣೆಗಳು ಕಂಡು ಬರುತ್ತಿವೆ. ದುದ್ದ ಹೋಬಳಿಯ ಮುಖಂಡ ರವಿಭೋಜೇಗೌಡ, ಪಾಂಡವಪುರ ತಾಲ್ಲೂಕಿನ ಎಚ್.ತ್ಯಾಗರಾಜು, ಡಾ.ಕೃಷ್ಣ, ಡಾ.ಎಚ್.ಎನ್.ರವೀಂದ್ರ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ಪಕ್ಷ ಕಟ್ಟುವಲ್ಲಿ ತೊಡಗಿದ್ದಾರೆ. ಅಂತೆಯೇ ಎಚ್.ಮಂಜುನಾಥ್ ಅವರು ರಾಜಕಾರಣದಲ್ಲಿ ತೊಡಗಿಸಿಕೊ ಳ್ಳಬೇಕಿದೆ ಎಂದು ಹೇಳಿದರು.

22ರಂದು ಪಾಂಡವಪುರಕ್ಕೆ ಡಿಕೆಶಿ: ಫೆ.22ರಂದು ಪಾಂಡವಪುರ ಪಟ್ಟಣದ ಟಿಎಪಿಸಿಎಸ್‌ ರೈತ ಸಭಾಂಗಣದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಶೀಘ್ರ ನಿರ್ಧಾರ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಹಲವಾರು ಕಾರಣಗಳಿಂದ ನಾನು ರಾಜಕಾರಣದಲ್ಲಿ ತಟಸ್ಥಗೊಂಡಿದ್ದೆ. ಸಮಯೋಚಿತವಾಗಿ ರಾಜಕಾರಣದಲ್ಲಿ ಸಕ್ರಿಯಗೊಳ್ಳಲು ನಿರ್ಧಾರ ಕೈಗೊಳ್ಳುವೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಕೃಷ್ಣೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಕುಮಾರ್, ಪ.ಜಾ, ಪ.ವರ್ಗ ಘಟಕದ ತಾಲ್ಲೂಕು ಅಧ್ಯಕ್ಷ ಎ.ಜಿ.ಬಸವರಾಜು, ಯುವ ಘಟಕದ ಮಾಜಿ ಅಧ್ಯಕ್ಷ ಚಿದಂಬರ್, ಹಿರಿಯ ರಾಜಕಾರಣಿಗಳಾದ ಕೆ.ಬಿ.ನರಸಿಂಹೇಗೌಡ, ಡಾ.ಮಾಯಿಗೌಡ, ಸೋಮೇಗೌಡ, ಚಕ್ರಪಾಣಿ, ಹೊನಗಾನಹಳ್ಳಿ ಸ್ವಾಮಿಗೌಡ, ರಾಮಕೃಷ್ಣೇಗೌಡ, ಟಿಎಪಿಸಿಎಂಸ್ ನಿರ್ದೇಶಕ ಚಿಕ್ಕಾಡೆ ಶ್ರೀಕಾಂತ್, ಮುಖಂಡರಾದ ಮಧುಮಾದೇಗೌಡ, ರವಿಬೋಜೇಗೌಡ, ಡಾ.ಕೃಷ್ಣ, ಡಾ.ಎಚ್‌.ಎನ್.ರವೀಂದ್ರ, ಕೆ.ಕುಬೇರ, ಬಿ.ಜೆ.ಸ್ವಾಮಿ, ಭರತ್ ಪಟೇಲ್ ರಾಘವೇಂದ್ರ, ಮುಖಂಡ ಚಿಕ್ಕಾಡೆ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.