ADVERTISEMENT

ಅಕ್ರಮ ಪಡಿತರ ಅಕ್ಕಿ ಸಾಗಣೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 4:12 IST
Last Updated 28 ಫೆಬ್ರುವರಿ 2026, 4:12 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಳಕವಾಡಿ: ಸಮೀಪ ರಾಷ್ಟ್ರೀಯ ಹೆದ್ದಾರಿ 209ರ ಮಳವಳ್ಳಿ- ಕೊಳ್ಳೇಗಾಲ ಮುಖ್ಯರಸ್ತೆಯ ದಾಸನದೊಡ್ಡಿ ಗ್ರಾಮದ ಬಳಿ ರಿತೇಶ್ ಹೋಟಲ್ ಮುಂಭಾಗ ಗುರುವಾರ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ಟಿ.ನರಸೀಪುರ ತಾಲ್ಲೂಕಿನ ಹಳೇ ನರೀಪುರ ಗ್ರಾಮದ ಅಸ್ಗರ್ ಆಲಿ ಎಂಬ ಆರೋಪಿಯನ್ನು ಆಹಾರ ನಿರೀಕ್ಷಕ ಬಿ.ಅಶ್ವಥ್ ಹಾಗೂ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಆರೋಪಿ ಯಾವುದೇ ಪರವಾನಿಗೆ ಹಾಗೂ ಬಿಲ್ಲುಗಳು ಇಲ್ಲದೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾಗ ತಪಾಸಣೆ ನಡೆಸಿ ಸುಮಾರು ₹ 28,685 ಮೌಲ್ಯದ 9 ಕ್ವಿಂಟಲ್ 99 ಕೆ.ಜಿ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.