ADVERTISEMENT

ಮಂಡ್ಯದಲ್ಲಿ ಅಂತರ್ಜಾತಿ ವಿವಾಹ: ಪ್ರೇಮಿಗಳನ್ನು ಒಂದುಗೂಡಿಸಿದ ದಲಿತ ಸಂಘರ್ಷ ಸಮಿತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 15:25 IST
Last Updated 19 ಸೆಪ್ಟೆಂಬರ್ 2018, 15:25 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್‌ ಪ್ರತಿಮೆ ಎದುರು ಬುಧವಾರ ಪೂಜಾ ಹಾಗೂ ಎಸ್‌.ವೈ.ಶಶಿಕುಮಾರ್‌ ವಿವಾಹ ಪ್ರತಿಜ್ಞಾವಿಧಿ ಸ್ವೀಕರಿಸಿದರು
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್‌ ಪ್ರತಿಮೆ ಎದುರು ಬುಧವಾರ ಪೂಜಾ ಹಾಗೂ ಎಸ್‌.ವೈ.ಶಶಿಕುಮಾರ್‌ ವಿವಾಹ ಪ್ರತಿಜ್ಞಾವಿಧಿ ಸ್ವೀಕರಿಸಿದರು   

ಮಂಡ್ಯ : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಬುಧವಾರ ಅಂತರ್ಜಾತಿ ವಿವಾಹಕ್ಕೆ ಸಾಕ್ಷಿಯಾಯಿತು. ದಲಿತ ಸಂಘರ್ಷ ಸಮಿತಿ ಸದಸ್ಯರು ಒಲಿದ ಹೃದಯಗಳನ್ನು ಒಂದುಗೂಡಿಸಿದರು.

ಕೆ.ಆರ್.ಪೇಟೆಯ ರಾಮಕೃಷ್ಣೇಗೌಡರ ಅವರ ಪುತ್ರಿ ಪೂಜಾ ಮತ್ತು ಸಿಂಧಘಟ್ಟ ಗ್ರಾಮದ ವೈಕುಂಠಯ್ಯ ಅವರ ಪುತ್ರ ಎಸ್‌.ವೈ.ಶಶಿಕುಮಾರ್ ಅವರು ಕಳೆದ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ವಿವಾಹವಾದರು. ಅಂಬೇಡ್ಕರ್‌ ಪ್ರತಿಮೆ ಎದುರು ಹಾರ ಬದಲಾಯಿಸಿಕೊಂಡರು. ದಸಂಸದ ಹಿರಿಯರು ವಿವಾಹ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ನಂತರ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಿ ವಿವಾಹ ನೋಂದಣಿ ಮಾಡಿಸಿದರು. ವಧು ಒಕ್ಕಲಿಗ, ವರ ಪರಿಶಿಷ್ಟ ಜಾತಿಗೆ ಸೇರಿದ್ದಾರೆ.

ದಸಂಸ ರಾಜ್ಯ ಘಟದ ಸಂಚಾಲಕ ಎಂ.ಬಿ.ಶ್ರೀನಿವಾಸ್, ವಕೀಲ ಕಣಿವೆ ಯೋಗೇಶ್, ಎಂ.ವಿ.ಕೃಷ್ಣ, ಜಗದೀಶ್, ಪುಟ್ಟರಾಜು, ಪರಮೇಶ್, ಚೆಲುವರಾಜು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.