
ಕೆ.ಆರ್.ಪೇಟೆ: ತಾಲ್ಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ವೈವಿಧ್ಯಮಯ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಮತ್ತು ಸಾಧಕರಿಗೆ ಅಭಿನಂದನೆ ಸಮಾರಂಭವನ್ನು ಡಿ.14ರಂದು ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ತಿಳಿಸಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಯ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಪಟ್ಟಣದಲ್ಲಿರುವ ಪುರಸಭಾ ಮೈದಾನದಲ್ಲಿ ಡಿ.14ರಂದು ಸಂಜೆ ಸಮಾರಂಭ ನಡೆಯಲಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸೈನಿಕರಿಗೆ ಮತ್ತು ರೈತರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಕೆ.ಸಿ ನಾರಾಯಣಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್ ಜಗದೀಶ್ ವಹಿಸಲಿದ್ದಾರೆ. ಶಾಸಕ ಎಚ್.ಟಿ ಮಂಜು, ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರ ಕುಮಾರ್, ಮಾಜಿ ಶಾಸಕರಾದ ಬಿ.ಪ್ರಕಾಶ್ ಕೆ. ಬಿ ಚಂದ್ರಶೇಖರ್, ಡಾಲು ರವಿ, ಆರ್.ಟಿ.ಓ ಮಲ್ಲಿಕಾರ್ಜುನ್, ವಿಜಯರಾಮೇಗೌಡ, ಎಂ.ಬಿ ಹರೀಶ್, ಶೀಳನೆರೆ ಅಂಬರೀಶ್, ಜಯಕರ್ನಾಟಕ ಸಂಘಟನೆಯ ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸುವರು. ರಾತ್ರಿ 7ಗಂಟೆಯಿಂದ ತುಮಕೂರಿನ ತುಮಕೂರಿನ ದೇವು ಅವರ ದರ್ಶನ್ ಮೆಲೋಡಿಸ್‌ನಿಂದ ರಸಮಂಜರಿ ನಡೆಯಲಿದ್ದು ಚಿತ್ರ ನಟರಾದ ಶ್ರೀಮುರಳಿ, ವಸಿಷ್ಠಸಿಂಹ, ಟೆನಿಸ್ ಕೃಷ್ಣ, ಚಂದ್ರಪ್ರಭ, ಶೀಳನೆರೆ ಕೇಶವ, ಪ್ರಶಾಂತ್ ಚಕ್ರವರ್ತಿ, ತ್ರಿವಿಕ್ರಮ್ ಪಾಲ್ಗೊಳ್ಳುವರು’ ಎಂದರು.
ಸಭೆಯಲ್ಲಿ ಸಂಘಟನೆಯ ಪ್ರಮುಖರಾದ ಜಯಲಕ್ಷ್ಮಮ್ಮ, ಕೆ.ಎಲ್ ಮಹೇಶ್ , ಅನುವಿನಕಟ್ಟೆ ಆನಂದ್ ಸರಸ್ವತಿ, ಅನು, ಮನು, ಅಗ್ರಹಾರ ಯೋಗೇಶ್, ಪ್ರಭುನಾಯಕ, ಭಾವಜಿ ಚಂದ್ರು, ಅಕ್ಷಯ್, ಸತೀಶ್, ರಾಘವೇಂದ್ರ, ಅರುಣ್ ಕುಮಾರ್, ಅಶೋಕ್, ಅಜಿತ್, ಯಶವಂತ್,ರವಿ, ರಾಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.