
ಮಂಡ್ಯ: ನಗರದ ಹೊಸಹಳ್ಳಿ ರಾಮನಹಳ್ಳಿ ವೃತ್ತದಲ್ಲಿರುವ ಬಿಸಿಲು ಮಾರಮ್ಮ ದೇವಾಲಯ ಆವರಣದಲ್ಲಿ ಯಜಮಾನರು ಮತ್ತು ಗ್ರಾಮಸ್ಥರು ಕಾರ್ತಿಕ ಮಾಸ ಪ್ರಯುಕ್ತ ಆಯೋಜಿಸಿದ್ದ ಕಡ್ಲೆಪುರಿ ಪರಿಷೆ ಯಶಸ್ವಿಯಾಗಿ ನಡೆಯಿತು.
ದೇವಿಯ ಮೂರ್ತಿಯನ್ನು ವಿವಿಧ ಹೂಗಳಿಂದ ಅದ್ಧೂರಿಯಾಗಿ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವರ ಬಸವಪ್ಪನಿಗೆ ಅಲಂಕಾರ ಮಾಡಿ ಪಂಜಿನ ಸೇವೆ ಮೂಲಕ ಪೂಜೆ ಮಾಡಲಾಯಿತು.
30 ಮೂಟೆ ಕಡ್ಲೆಪುರಿ ಸುರಿದು ರಾಶಿ ಮಾಡಿ, ರಾಶಿ ಪೂಜೆ ನೆರವೇರಿಸಲಾಯಿತು. ನೆರೆದಿದ್ದ ಭಕ್ತರು ಮಾದೇಶ್ವರ ಮತ್ತು ಮಾರಮ್ಮ ದೇವರಿಗೆ ಘೋಷಣೆ ಕೂಗಿದರು.
ಭಕ್ತರಿಗೆ ಪಂಚಾಮೃತ ವಿನಿಯೋಗದೊಂದಿಗೆ ಕಡ್ಲೆಪುರಿ ವಿತರಿಸಲಾಯಿತು. ಹೊಸಹಳ್ಳಿ ಮತ್ತು ರಾಮನಹಳ್ಳಿ ಯಜಮಾನರು-ಗ್ರಾಮದ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.