ADVERTISEMENT

ಸರ್ಕಾರ ಕನ್ನಡ ಅಸ್ಮಿತೆ ಕಾಪಾಡಲಿ: ಇನ್ನರ್‌ವಿಲ್ ಅಧ್ಯಕ್ಷೆ ಧರಣಿ ಪುಟ್ಟೇಗೌಡ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:41 IST
Last Updated 16 ನವೆಂಬರ್ 2025, 5:41 IST
ಭಾರತೀನಗರದ ಇನ್ನರ್‌ವೀಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಬಿ.ಆರ್.ಪ್ರತೀಕ್ ಗೌಡ ಅವರನ್ನು ಅಭಿನಂದಿಸಲಾಯಿತು
ಭಾರತೀನಗರದ ಇನ್ನರ್‌ವೀಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಬಿ.ಆರ್.ಪ್ರತೀಕ್ ಗೌಡ ಅವರನ್ನು ಅಭಿನಂದಿಸಲಾಯಿತು   

ಭಾರತೀನಗರ: ‘ಪರಭಾಷಿಗರ ವಲಸೆಯಿಂದ ರಾಜ್ಯದಲ್ಲಿ ಕನ್ನಡ ಭಾಷೆಯ ಅಸ್ಮಿತೆಗೆ ಧಕ್ಕೆ ಬಂದಿದ್ದು, ತಮಿಳುನಾಡು, ಕೇರಳ ರಾಜ್ಯಗಳಂತೆ ನಮ್ಮಲ್ಲೂ ರಾಜ್ಯ ಸರ್ಕಾರ ಕನ್ನಡ ಭಾಷೆ ಉಳಿವಿಗೆ ಕಾನೂನು ಜಾರಿಗೊಳಿಸಲಿ’ ಎಂದು ಇನ್ನರ್‌ವಿಲ್ ಸಂಸ್ಥೆಯ ಅಧ್ಯಕ್ಷೆ ಧರಣಿ ಪುಟ್ಟೇಗೌಡ ಆಗ್ರಹಿಸಿದರು.

ಸಂಸ್ಥೆಯಿಂದ ಇಲ್ಲಿನ ಓಂ ಶಾಂತಿ ಮಾರ್ಗ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ‘ರಾಜ್ಯದಲ್ಲಿ ಪರಭಾಷಿಗರು ತಮ್ಮ ಭಾಷೆಯ ವ್ಯಾಮೋಹ ಬಿಡದೆ ಕನ್ನಡ ಭಾಷೆಗಿರುವ ಸ್ಥಾನಮಾನವನ್ನು ಕೆಳಹಂತಕ್ಕೆ ಕೊಂಡೊಯ್ಯಲು ನೋಡುತ್ತಿದ್ದಾರೆ. ವ್ಯಾಪಾರ ಸ್ಥಳದ ನಾಮಫಲಕಗಳಲ್ಲಿ ಕನ್ನಡವನ್ನು ಐಚ್ಛಿಕ ಸ್ಥಾನಕ್ಕೆ ಮೀಸಲಿಟ್ಟಿದ್ದು, ಕನ್ನಡ ನಾಡಿಗೆ ಎಸಗುವ ಅಪಚಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈಜ್ಞಾನಿಕ ಸಂಶೋಧನಾ ವಿಭಾಗದಲ್ಲಿ ಸಂಶೋಧನೆ ಮಾಡಿ ಪ್ರತಿಷ್ಠಿತ ಏಷ್ಯಾ ಬುಕ್ ಆಫ್ ರೆಕಾರ್ಡ್‌, ಇಂಡಿಯಾ ಮತ್ತು ವರ್ಲಡ್‌ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನಪಡೆದ ಬಿದರಹೊಸಹಳ್ಳಿಯ ರಾಜಣ್ಣ ರೇಖಾ ದಂಪತಿಗಳ ಪುತ್ರ ಬಿ.ಆರ್.ಪ್ರತೀಕ್‌ಗೌಡ ಅವರನ್ನು ಅಭಿನಂದಿಸಲಾಯಿತು.

ADVERTISEMENT

ಸಂಸ್ಥೆಯ ಕಾರ್ಯದರ್ಶಿ ಸವಿತ, ಮಾಜಿ ಅಧ್ಯಕ್ಷೆ ಲಕ್ಷ್ಮಿಮಂಜುಳಾ ಬೋರೇಗೌಡ, ಖಜಾಂಚಿ ಜಯಲಕ್ಷ್ಮಿ ವೆಂಕಟೇಗೌಡ, ಸದಸ್ಯರಾದ ಜಯಮ್ಮ ಲಕ್ಷ್ಮಣ್, ಸೌಭಾಗ್ಯ ಸಿದ್ದಲಿಂಗು, ನೀಲಮ್ಮ, ಜಯಲಕ್ಷ್ಮಿ ಪುಟ್ಟಸ್ವಾಮಿ, ಪುಟ್ಟರತ್ನ, ಭಾಗ್ಯಮ್ಮ, ಸುಧಾ, ನಂದ, ಇಂದಿರಾ, ಅನುಪ ಮಸತೀಶ್, ಸುರೇಖಾ, ತಾರಾ, ರಶ್ಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.