ಮಳವಳ್ಳಿ: ತಾಲ್ಲೂಕಿನ ಕೆಂಬೂತಗೆರೆ(ಅಮೃತೇಶ್ವರನಹಳ್ಳಿ ಕಾಲೊನಿ) ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ಎ.ಇ.ತೇಜೇಂದ್ರ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೆ.ಸಿ.ಕೆಂಪರಾಜು ಚುನಾಯಿತರಾದರು.
ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎ.ಇ.ತೇಜೇಂದ್ರ ಕುಮಾರ್ ಮತ್ತು ಎ.ಎಸ್.ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಸಿ.ಕೆಂಪರಾಜು ಹಾಗೂ ಬಿಲ್ಲಯ್ಯ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಎ.ಇ.ತೇಜೇಂದ್ರ ಕುಮಾರ್ ಮತ್ತು ಕೆ.ಸಿ.ಕೆಂಪರಾಜು ತಲಾ 8 ಮತ ಪಡೆದು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಂ.ಕೆ.ತ್ಯಾಗರಾಜ್ ಪ್ರಸಾದ್ ಘೋಷಿಸಿದರು.
ನಿರ್ದೇಶಕರಾದ ಎನ್.ಗಿರೀಶ್, ಜಿ.ಎಸ್.ಕುಮಾರ್, ಎಚ್.ಎಂ.ಮುದ್ದೇಗೌಡ, ಬಿಲ್ಲಯ್ಯ, ಜಯಮ್ಮ, ಎಸ್.ಡಿ.ಪುಟ್ಟಸ್ವಾಮಿ, ಸುಮಾ, ಎನ್.ರಮ್ಯಾ, ಡಿ.ಕಿರಣ್ ಕುಮಾರ್, ಮುಖಂಡರಾದ ಶಂಕರೇಗೌಡ, ಪುಟ್ಟರಾಜು, ಚಿಕ್ಕಿರೇಗೌಡ, ದೊಡ್ಡತಮ್ಮಯ್ಯ, ಪರಮೇಶ್ವರಪ್ಪ, ಮಹದೇವಸ್ವಾಮಿ, ಉಮೇಶ್, ಮಾದೇಗೌಡ, ದೊಳ್ಳೇಗೌಡ, ನಾಡಗೌಡ ದೊಡ್ಡಮೊಗೇಗೌಡ, ನಾಗೇಗೌಡ, ಕಿರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.