
ಮಳವಳ್ಳಿ: ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಯೋಗೇಶ್ ಎಂಬುವವರು ಎರಡು ಕ್ನಿಡಿ ವೈಫಲ್ಯದಿಂದ ಬಳಲುತ್ತಿದ್ದು, ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದಾರೆ.
42 ವರ್ಷದ ಯೋಗೇಶ್ ಬಡ ಕುಟುಂಬದವರಾಗಿದ್ದು, ಕಳೆದ ಒಂದು ವರ್ಷದ ಹಿಂದೆ ಎರಡೂ ಕ್ನಿಡಿಗಳು ವೈಫಲ್ಯವಾಗಿವೆ. ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಇನ್ನೂ ಚಿಕಿತ್ಸೆಗಾಗಿ ಹಣ ಕೊರತೆಯಿಂದ ಆಸ್ಪತ್ರೆಗೆ ಹೋಗಲಾದ ಸ್ಥಿತಿ ನಿರ್ಮಾಣವಾಗಿದೆ. ಪತ್ನಿ ಕೂಲಿ ಕೆಲಸ ಮಾಡಿ ಸಂಸಾರದ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ನಾಲ್ವರು ಪುತ್ರಿಯರು ಇದ್ದು, ಅವರ ವಿದ್ಯಾಭ್ಯಾಸಕ್ಕೂ ಸಂಕಷ್ಟ ಇದೆ. ಹೀಗಾಗಿ ದಾನಿಗಳಿಂದ ಆರ್ಥಿಕ ನೆರವು ಕೋರಿದ್ದಾರೆ.
ಅವರ ಬ್ಯಾಂಕ್ ಖಾತೆಯ ವಿವರ:
ಕರ್ನಾಟಕ ಗ್ರಾಮೀಣ ಬ್ಯಾಂಕ್, ಕಿರುಗಾವಲು ಶಾಖೆ. ಮಳವಳ್ಳಿ ತಾಲ್ಲೂಕು,
ಖಾತೆ ನಂ.12380100082110,
ಐಎಫ್‌ಎಸ್‌ಸಿ ಸಂಖ್ಯೆ-ಪಿಕೆಜಿಬಿ0012380.
ದೂರವಾಣಿ ಸಂಖ್ಯೆ-73377 34678.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.