ADVERTISEMENT

ಕಿರಗಸೂರು: ಮಹದೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 13:43 IST
Last Updated 3 ಮಾರ್ಚ್ 2025, 13:43 IST
ಬೆಳಕವಾಡಿ ಸಮೀಪದ ಕಿರಗಸೂರು ಗ್ರಾಮದಲ್ಲಿ ನೂತನ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ದೇವರ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯಿತು
ಬೆಳಕವಾಡಿ ಸಮೀಪದ ಕಿರಗಸೂರು ಗ್ರಾಮದಲ್ಲಿ ನೂತನ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ದೇವರ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯಿತು   

ಬೆಳಕವಾಡಿ: ಸಮೀಪದ ಕಿರಗಸೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ 7.7 ಅಡಿ ಎತ್ತರದ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ವಿಗ್ರಹ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪೂಜೆ ಕೈಂಕರ್ಯಗಳು ಸೋಮವಾರ ಜರುಗಿದವು.

ಬೆಳಿಗ್ಗೆ ದೇಗುಲದಲ್ಲಿ ಮಹಾಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹ, ಸ್ಥಳ ಶುದ್ದಿ, ಗಂಗಾ ಪೂಜೆ, ಗಣಪತಿ ಹೋಮ, ವಾಸ್ತುಹೋಮ, ನವಗ್ರಹ ಹೋಮ, ಹವನ, ಲಿಂಗನ್ಯಾಸ ಮತ್ತು ಕಾವೇರಿ ನದಿ ತೀರದಿಂದ ಹಾಲರವಿ ಸೇವೆಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.

ನಂತರ ಹುಲಿವಾಹನ ಸಮೇತ ಮಹದೇಶ್ವರಸ್ವಾಮಿ ದೇವರ ಮೂರ್ತಿ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ. ವಿವಿಧ ಹೂವುಗಳಿಂದ ಅಲಂಕಾರ, ಧೂಪ, ದೀಪ, ನೈವೇದ್ಯ, ಮಹಾಮಂಗಳಾರತಿ ಪೂಜೆ ಕೈಂಕರ್ಯಗಳನ್ನು ಮಂಡ್ಯದ ವೇದಮೂರ್ತಿ ಕೃಷ್ಣಾಚಾರ್ಯ ಹಾಗೂ ತಂಡದವರು ನೆರವೇರಿಸಿದರು.

ADVERTISEMENT

ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ತೀರ್ಥ ಪ್ರಸಾದ ವಿನಿಯೋಗವನ್ನು ಅರ್ಚಕ ದೇವರಾಜು ಮಾಡಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಗ್ರಾಮಸ್ಥರು, ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.