ADVERTISEMENT

ಕೊಡಗಹಳ್ಳಿಯಲ್ಲಿ ಬೀರೇಶ್ವರ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 3:43 IST
Last Updated 15 ಮಾರ್ಚ್ 2021, 3:43 IST
ಸಂತೇಬಾಚಹಳ್ಳಿ ಹೋಬಳಿಯ ಕೊಡಗಹಳ್ಳಿಯಲ್ಲಿ ಉದ್ಭವ ಬೀರೇಶ್ವರ ದೇವರ ಉತ್ಸವ ನಡೆಯಿತು
ಸಂತೇಬಾಚಹಳ್ಳಿ ಹೋಬಳಿಯ ಕೊಡಗಹಳ್ಳಿಯಲ್ಲಿ ಉದ್ಭವ ಬೀರೇಶ್ವರ ದೇವರ ಉತ್ಸವ ನಡೆಯಿತು   

ಸಂತೇಬಾಚಹಳ್ಳಿ: ಕೊಡಗಹಳ್ಳಿಯ ಬೀರೇಶ್ವರ ದೇವರ ಹಬ್ಬದ ಪ್ರಯುಕ್ತ ಅಕ್ಕಪಕ್ಕದ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೀರೇಶ್ವರ ದೇವಾಲಯದ ಆವರಣದಲ್ಲಿರುವ ಮಜ್ಜನ ಬಾವಿಯ ಬಳಿ ಶ್ರೀಚಿಕ್ಕಮ್ಮ, ದೊಡ್ಡಯ್ಯ, ದಿಡ್ಡಮ್ಮ, ಸತ್ತಿಗಪ್ಪ, ಅಯ್ಯಸಾನಹಳ್ಳಿ ರಾಯಸ್ವಾಮಿ, ಕೊಡಳ್ಳಿ ರಾಯಸಿಂಗಮ್ಮ ಮುಂತಾದ ದೇವರುಗಳಿಗೆ ಭಕ್ತರು ಪೂಜೆ ಸಲ್ಲಿಸಿದರು.

ಗ್ರಾಮದ ರಾಜಬೀದಿಗಳಲ್ಲಿ ನಂದಿಕುಣಿತ, ಡೊಳ್ಳುಕುಣಿತ, ರಂಗಕುಣಿತ, ದೇವರ ಭಕ್ತಿಗೀತೆಗಳು, ಪೂಜಾ ಕುಣಿತದ ಜೊತೆಗೆ ತಮಟೆ, ಮಂಗಳ ವಾದ್ಯಗಳೊಂದಿಗೆ ಉತ್ಸವಮೂರ್ತಿ ಮೆರವಣಿಗೆ ಮಾಡಲಾಯಿತು.

ADVERTISEMENT

ನಂತರ ದೇವಸ್ಥಾನದಲ್ಲಿ ಅಭಿಷೇಕ, ಹೋಮ, ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳುನಡೆದವು. ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಶ್ರೀ ಬೀರೇಶ್ವರ ಸ್ವಾಮಿಯ ಶಿವರಾತ್ರಿ ಉತ್ಸವ ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.