ಸಿದ್ದರಾಮಯ್ಯ
ಮಂಡ್ಯ: ಕುರುಬ ಸಮುದಾಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿದ ಆರೋಪದ ಮೇಲೆ ಬೆನ್ನಟ್ಟಿ ಗ್ರಾಮದ ಕುಮಾರ ಮತ್ತು ಶಾನುಭೋಗನಹಳ್ಳಿಯ ಮಹೇಶ್ ಎನ್ನುವವರ ವಿರುದ್ಧ ತಾಲ್ಲೂಕಿನ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಇಬ್ಬರೂ ಸಮಾಜ ಹಾಗೂ ಸಿದ್ದರಾಮಯ್ಯ ವಿರುದ್ಧ ಅವ್ಯಾಚ್ಯ ಶಬ್ದ ಬಳಸಿದ್ದಾರೆ, ಇವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ತಾಲ್ಲೂಕಿನ ಬಸರಾಳು (ಹೇಮಾವತಿ ಬಡಾವಣೆ)ಗ್ರಾಮದ ಕೆ.ಎಂ.ಸುರೇಶ್ ದೂರು ನೀಡಿದ್ದಾರೆ. ಇವರಿಬ್ಬರೂ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಘಟನೆ ವಿವರ: ಶುಕ್ರವಾರ ರಾತ್ರಿ 8ರ ಸುಮಾರಿಗೆ ಕುಮಾರ ಮತ್ತು ಮಹೇಶ್ ಅವರು ಕುರುಬರ ಸಮಾಜವನ್ನು ನಿಂದಿಸಿದ್ದಾರೆ. ಸರ್ಕಾರ ನಿಮ್ಮದೇ ಇದೆ, ತಾಕತ್ತಿದ್ದರೆ ನಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸವಾಲು ಹಾಕಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ.
ಅವರ ಈ ಮಾತುಗಳು ಜಿಲ್ಲೆಯಲ್ಲಿ ಸಮಾಜದವರ ಮೇಲೆ ಪರಿಣಾಮ ಬೀರುವುದರಿಂದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ. ಜೊತೆಗೆ, ಸಮಾಜದವರು ಠಾಣೆಗೆ ಬಂದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.