ಚಾಕು
(ಸಾಂದರ್ಭಿಕ ಚಿತ್ರ)
ಮಂಡ್ಯ: ತಾಲ್ಲೂಕಿನ ಬೂದನೂರು ಬಳಿ ಭಾನುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.
ತಾಲ್ಲೂಕಿನ ಕಟ್ಟೇದೊಡ್ಡಿ ಗ್ರಾಮದ ಮನೋಜ್‌ಗೌಡ(28) ಹಲ್ಲೆಗೊಳಗಾದವರು.
‘ಜಮೀನಿನ ವಿಷಯ ತೆಗೆದು ಅದೇ ಗ್ರಾಮದ ರಂಜನ್‌ಕುಮಾರ್, ಗಿರೀಶ್ ಕೆ.ಜೆ, ರವಿಕುಮಾರ್, ಪವನ್, ಹರೀಶ್, ಚಂದನ್, ಬೊಮ್ಮಲಿಂಗ, ಪುಟ್ಟಸ್ವಾಮಿ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ’ ಎಂದು ಮನೋಜ್‌ಗೌಡ ಅವರ ಪತ್ನಿ ಸುಶ್ಮಿತಾ ದೂರು ನೀಡಿದ್ದಾರೆ.
ಮನೋಜ್‌ಗೌಡ ಗ್ರಾಮ ತೊರೆದಿದ್ದು, ಬೂದನೂರು ಬಳಿಯ ಹೊಟೇಲ್‌ನಲ್ಲಿ ಊಟ ಮಾಡುವಾಗ ಏಕಾಏಕಿ ದಾಳಿ ನಡೆಸಿ ಆತನ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದಿದ್ದಾರೆ ಎಂದು ದೂರಿದ್ದಾರೆ.
ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೋಜ್‌ಗೌಡ ಅವರನ್ನು ಸ್ಥಳೀಯರು ಮಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.