ADVERTISEMENT

ವಕೀಲ ರವೀಂದ್ರ ಕೊಲೆ ಪ್ರಕರಣ: ಆರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 4:14 IST
Last Updated 7 ಜನವರಿ 2021, 4:14 IST
   

ಮದ್ದೂರು: ತಾಲ್ಲೂಕಿನ ನವಿಲೆಯ ಶಿಂಷಾ ನದಿಯ ಬಳಿ ಜ.2ರಂದು ನಡೆದ ವಕೀಲ ರವೀಂದ್ರ ಕೊಲೆ ಪ್ರಕರಣದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನವಿಲೆ ಗ್ರಾಮದ ನಿವಾಸಿಗಳಾದ ಎನ್.ಟಿ.ರಂಗಸ್ವಾಮಿ (33), ಸಂತೋಷ (32), ರಂಗಸ್ವಾಮಿ (35), ಹರಕನಹಳ್ಳಿ ಗ್ರಾಮದ ಅಭಿರಾಜ, ನಾಗರಾಜು (20) ಹಾಗೂ ಓರ್ವ ಬಾಲಕ ಬಂಧಿತರು.

ಕೊಲೆಯಾದ ವಕೀಲ ರವೀಂದ್ರ ಅವರನ್ನು 2017ರಲ್ಲಿ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಜಮೀನು ವಿವಾದದ ಹಿನ್ನಲೆಯಲ್ಲಿ ಆರೋಪಿಗಳು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಬಂಧಿತರಲ್ಲಿ ಕೆಲವರು ಸವರ್ಣೀಯರಾಗಿದ್ದು, ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಜೆ.ಪೃಥ್ವಿ ನೇತೃತ್ವದಲ್ಲಿ ಸಿಪಿಐ ಕೆ.ಆರ್.ಪ್ರಸಾದ್, ಪಿಎಸ್‌ಐಗಳಾದ ಪುರುಷೋತ್ತಮ, ಮೋಹನ್ ಡಿ.ಪಟೇಲ್, ಪ್ರಭಾ, ಸಿಬ್ಬಂದಿ ಮಹದೇವಯ್ಯ, ಕರಿಗಿರಿಗೌಡ, ಕುಮಾರಸ್ವಾಮಿ, ವಿಠ್ಮಲ್ ಜಿ.ಕರಿ ಗಾರ್, ಎನ್‌.ಪ್ರಶಾಂತ್ ಕುಮಾರ್, ಗುರುಪ್ರಸಾದ್, ಪ್ರೀತಿಕುಮಾರ್, ರವಿಕಿರಣ್, ಲೋಕೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.

ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.