ADVERTISEMENT

ಚಿರತೆ ಕಳೇಬರ ಪತ್ತೆ: ಹಸಿವಿನಿಂದ ಸಾವು ಶಂಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 20:15 IST
Last Updated 13 ಮೇ 2020, 20:15 IST
ಪಾಂಡವಪುರ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದ ಬಳಿ ತೋಟವೊಂದರಲ್ಲಿ ಪತ್ತೆಯಾದ ಚಿರತೆಯ ಕಳೇಬರ
ಪಾಂಡವಪುರ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದ ಬಳಿ ತೋಟವೊಂದರಲ್ಲಿ ಪತ್ತೆಯಾದ ಚಿರತೆಯ ಕಳೇಬರ   

ಪಾಂಡವಪುರ: ತಾಲ್ಲೂಕಿನ ಚಿನಕುರಳಿ ಹೋಬಳಿಯ, ಮಲ್ಲಿಗೆರೆ ಗ್ರಾಮದ ಬಾಳೆ ತೋಟ ವೊಂದರಲ್ಲಿ 3 ವರ್ಷದ ಚಿರತೆಯ ಕಳೇಬರ ಪತ್ತೆಯಾಗಿದೆ.

ಮೂರು ದಿನಗಳ ಹಿಂದೆಯೇ ಸತ್ತಿರಬಹುದಾಗಿದ್ದು, ದೇಹದ ಮೇಲೆ ಗಾಯದ ಗುರುತು ಇಲ್ಲದಿರುವುದರಿಂದ ಹಸಿವಿನಿಂದ ಮೃತಪಟ್ಟಿರಬಹುದು ಎಂದು ಪಶುವೈದ್ಯರು ಶಂಕಿಸಿದ್ದಾರೆ.

ತೋಟದ ಮಾಲೀಕ ಮಂಜು ಅವರು ಮಂಗಳವಾರ ಸಂಜೆ ತೋಟಕ್ಕೆ ಹೋದಾಗ ಚಿರತೆ ಸತ್ತುಬಿದ್ದ ವಿಷಯ ತಿಳಿದಿದೆ. ಇವರಿಂದ ವಿಷಯ ತಿಳಿದ ಅರಣ್ಯಾಧಿಕಾರಿ ಶಿವಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯಾಧಿಕಾರಿ ಡಾ. ನಟರಾಜ್‌ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಚಿರತೆಯ ಕಳೇಬರವನ್ನು ಸುಟ್ಟುಹಾಕಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.