ADVERTISEMENT

ಹಿರಿಕಳಲೆಯಲ್ಲಿ ಬೋಗಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:05 IST
Last Updated 8 ಫೆಬ್ರುವರಿ 2026, 4:05 IST
ಕಿಕ್ಕೇರಿ ಸಮೀಪದ ಹಿರಿಕಳಲೆಯ ತೋಟದಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಅರಣ್ಯ ಸಿಬ್ಬಂದಿ ವಾಹನದಲ್ಲಿ ಕೊಂಡೊಯ್ದರು
ಕಿಕ್ಕೇರಿ ಸಮೀಪದ ಹಿರಿಕಳಲೆಯ ತೋಟದಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಅರಣ್ಯ ಸಿಬ್ಬಂದಿ ವಾಹನದಲ್ಲಿ ಕೊಂಡೊಯ್ದರು   

ಕಿಕ್ಕೇರಿ: ಸಮೀಪದ ಹಿರಿಕಳಲೆ ಗ್ರಾಮದ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಇದರಿಂದ ಗ್ರಾಮಸ್ಥರು, ರೈತರು ತುಸು ನಿರಾಳವಾಗಿದ್ದಾರೆ.

ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಉಪಟಳದಿಂದ ರೈತರು ಭೀತಿಗೊಂಡಿದ್ದರು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಅರಣ್ಯ ಇಲಾಖೆಯವರು ಗ್ರಾಮದ ಕೃಷ್ಣಯ್ಯ ಅವರ ತೋಟದಲ್ಲಿ ಚಿರತೆ ಸೆರೆ ಹಿಡಿಯಲು ಬೋನನ್ನು ವಾರದ ಹಿಂದೆ ಇಟ್ಟಿದ್ದರು.

ಶನಿವಾರ ಮುಂಜಾನೆ ಚಿರತೆ ಬೋನಿನಲ್ಲಿದ್ದ ನಾಯಿ ತಿನ್ನಲು ಹೋಗಿ ಬಂಧಿಯಾಗಿದೆ. ಬೋನಿನಲ್ಲಿದ್ದ ಚಿರತೆ ವೀಕ್ಷಿಸಲು ಗ್ರಾಮಸ್ಥರು ತಂಡೋಪತಂಡವಾಗಿ ಬಂದಿದ್ದರು. ಜನರನ್ನು ನಿಯಂತ್ರಿಸಿ, ಬೋನನ್ನು ತಾಲ್ಲೂಕು ವಲಯ ಅರಣ್ಯ ಇಲಾಖೆಗೆ ತೆಗೆದುಕೊಂಡು ಹೋಗಲಾಯಿತು. ಚಿರತೆಯನ್ನು ಬಂಡಿಪುರ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಉಪವಲಯ ಅರಣ್ಯಾಧಿಕಾರಿ ಚೇತನ್, ನಂದಕುಮಾರ್, ಗಸ್ತು ವನಪಾಲಕ ಕೆ.ಎಲ್. ರವಿ, ಸಿಬ್ಬಂದಿ ಸಂಜೀವ್, ಶ್ರೀನಿವಾಸ್ ಇದ್ದರು.

ಕಿಕ್ಕೇರಿ ಸಮೀಪದ ಹಿರಿಕಳಲೆಯ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿರುವ ಚಿರತೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.