ADVERTISEMENT

ಬೆಳಕವಾಡಿ: ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 4:05 IST
Last Updated 26 ಆಗಸ್ಟ್ 2025, 4:05 IST
ಬೆಳಕವಾಡಿ ಸಮೀಪದ ಹಳದಾಸನಹಳ್ಳಿ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಚಿರತೆ ಮರಿಗಳು
ಬೆಳಕವಾಡಿ ಸಮೀಪದ ಹಳದಾಸನಹಳ್ಳಿ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಚಿರತೆ ಮರಿಗಳು   

ಬೆಳಕವಾಡಿ: ಸಮೀಪದ ಹಳದಾಸನಹಳ್ಳಿ ವ್ಯಾಪ್ತಿಯ ಕಾಳಿಹುಂಡಿ ರಸ್ತೆಯಲ್ಲಿರುವ ಕಬ್ಬಿನ ಗದ್ದೆವೊಂದರಲ್ಲಿ ಕಟಾವು ವೇಳೆ ಸೋಮವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.

ಕಗ್ಗಲೀಪುರ ಗ್ರಾಮದ ರೈತ ವೃಷಬೇಂದ್ರ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿರುವಾಗ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಲಯ ಅರಣ್ಯಾಧಿಕಾರಿ ಗವಿಯಪ್ಪ ಮಾತನಾಡಿ, ಮೂರು ಹೆಣ್ಣು ಚಿರತೆ ಮರಿಗಳಾಗಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿ ವೈದ್ಯರ ಸಲಹೆಯಂತೆ ಹಾಲುಣ್ಣುವ ಮರಿಗಳ ಪೋಷಣೆ ದೃಷ್ಟಿಯಿಂದ ರಾತ್ರಿ ತಾಯಿ ಚಿರತೆ ಜತೆಗೆ ಸೇರಿಸಲು ಮತ್ತು ಚಿರತೆ ಸೆರೆ ಹಿಡಿಯಲು ಬೋನ್ ಇರಿಸಿ ನಮ್ಮ ಸಿಬ್ಬಂದಿ ಅಲ್ಲಿಯೇ ಇದ್ದು ಕ್ರಮವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.