ಮದ್ದೂರು: ಬೂದಿ ಮುಚ್ಚಿದ ಕೆಂಡದಂತಿರುವ ಮದ್ದೂರು ಪಟ್ಟಣದಲ್ಲಿ ಶಾಂತಿಯ ವಾತಾವರಣ ನೆಲೆಸುತ್ತಿರುವ ಸಂಧರ್ಭದಲ್ಲಿ ಶನಿವಾರ ಸಂಜೆ ಮತ್ತೆ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆಲಕಾಲ ಗೊಂದಲ ಸೃಷ್ಠಿಯಾಗಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಭಾನುವಾರ ನಡೆಸಿದ್ದ ಅದೇ ಪಟ್ಟಣದ ಚನ್ನೇಗೌಡ ಬಡಾವಣೆಯ ಮತ್ತೊಂದು ಯುವಕರ ಬಳಗವು ಪ್ರತಿಷ್ಟಾಪಿಸಿದ್ದ ಗಣೇಶನ ಮೂರ್ತಿಯ ವಿರ್ಸಜನೆಯನ್ನು ಶನಿವಾರ ಹಮ್ಮಿಕೊಂಡಿದ್ದರು.
ಘಟನೆ ನಡೆದಿದ್ದ ರಾಮ್ ರಹೀಮ್ ನಗರದ ವಿವಾಧಿತ ಮಸೀದಿ ಹತ್ತಿರಕ್ಕೆ ಗಣೇಶನ ಮೂರ್ತಿ ಮೆರವಣಿಗೆ ಬಂದಾಗ ಪೊಲೀಸರು ಮಸೀದಿ ಮುಂದೆ ಹೋಗದಂತೆ ತಡೆದರು ಈ ವೇಳೆ ಯುವಕರು ಇದೇ ಮಾರ್ಗದಲ್ಲಿ ಮೆರವಣಿಗೆ ಹೋಗಬೇಕು ಎಂದು ಎಂದು ಪಟ್ಟು ಹಿಡಿದರು.
ಈ ವಿಚಾರವಾಗಿ ಪೊಲೀಸರು ಹಾಗೂ ಗಣೇಶ ಮೆರವಣಿಗೆಯಲ್ಲಿದ್ದವರ ಯುವಕರು ಜತೆಗೆ ಕೆಲಕಾಲ ಮಾತಿನ ಚಕಮಕಿ ನಡೆದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು, ಸಿಪಿಐ ವೆಂಕಟೇಗೌಡ ನೇತೃತ್ವದಲ್ಲಿ ಪೊಲೀಸರು ಮುಂಚಿತವಾಗಿಯೇ ಎಲ್ಲಾ ರೀತಿಯ ಮುಂಜಾಗ್ರತೆ ಕೈಗೊಳ್ಳುವ ಜತೆಗೆ ಗಣೇಶನ ಮೂರ್ತಿ ವಿಸರ್ಜನೆ ಮಾಡುವ ಯುವಕರನ್ನು ಮನವೊಲಿಸಲು ಯಶಸ್ವಿಯಾದ ನಂತರ ಯುವಕರು ಮತ್ತೊಂದು ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳುವ ಮೂಲಕ ಸಹಕಾರ ನೀಡಿ ದರು ಬಳಿಕ ಗಣೇಶನ ಮೂರ್ತಿ ವಿಸರ್ಜನೆ ಶಾಂತಿಯುತವಾಗಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.