ADVERTISEMENT

ಮದ್ದೂರು | ನಗರಸಭೆ ಹೆಚ್ಚುವರಿ ಕಟ್ಟಡ ನಿರ್ಮಾಣ: ಶಾಸಕ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 4:30 IST
Last Updated 15 ಡಿಸೆಂಬರ್ 2025, 4:30 IST
ಮದ್ದೂರಿನಲ್ಲಿ ₹2.20 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಎಂ. ಉದಯ್ ಶನಿವಾರ ಭೂಮಿಪೂಜೆ ನೆರವೇರಿಸಿದರು 
ಮದ್ದೂರಿನಲ್ಲಿ ₹2.20 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಎಂ. ಉದಯ್ ಶನಿವಾರ ಭೂಮಿಪೂಜೆ ನೆರವೇರಿಸಿದರು    

ಮದ್ದೂರು: ತೋಟಗಾರಿಕಾ ಇಲಾಖೆಯ ಒಂದು ಎಕರೆ ಜಾಗದಲ್ಲಿ ಮದ್ದೂರು ನಗರಸಭೆಯ ಹೆಚ್ಚುವರಿ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.

ನಗರಸಭೆ ಕಛೇರಿಯ ನವೀಕರಣ, ಸಿಡಿಎಸ್ ಭವನದ ಮೇಲಂಸ್ತು ಕಟ್ಟಡ, ಕಾಂಪೌಂಡ್ ನಿರ್ಮಾಣ ಸೇರಿದಂತೆ ₹ 2.20 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಸರ್ಕಾರ ಮೇಲ್ದರ್ಜೆಗೆರಿಸಿದ್ದು, ಹೀಗಾಗಿ ನಗರದ ಜೊತೆಗೆ 4 ಗ್ರಾಮ ಪಂಚಾಯಿತಿಗಳೂ  ಸೇರ್ಪಡೆಗೊಂಡಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದೆ. ಹೀಗಾಗಿ ಹಳೆಯ ಕಟ್ಟಡವನ್ನು ನವೀಕರಣ ಹಾಗೂ ಹೆಚ್ಚುವರಿ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

₹10 ಕೋಟಿ ಅನುದಾನ ಬಿಡುಗಡೆಗೆ ಪೌರಾಡಳಿತ ಸಚಿವರಿಗೆ ಪ್ರಸ್ತಾವ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು’ ಎಂದರು.

ನಗರದ ಪೇಟೆ ಬೀದಿ ವಿಸ್ತರಣೆಗೂ ಮುನ್ನ ಹಳೇ ಬಸ್ ನಿಲ್ದಾಣದ ತರಕಾರಿ ಮಾರುಕಟ್ಟೆಯ ಸಂಕೀರ್ಣ ಹಾಗೂ ಶಿವಪುರದಲ್ಲಿ ಮೀನು, ಕೋಳಿ ಹಾಗೂ ಮಾಂಸ ಮಾರುಕಟ್ಟೆ ಸಂಕೀರ್ಣ ಹಾಗೂ ನಗರದ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಶೀಘ್ರದಲ್ಲೇ ಸಿ.ಎಂ. ಬದಲಾವಣೆ

‘ನಾಳೆ ದೆಹಲಿಯಲ್ಲಿ ವೋಟ್ ಚೋರಿ ಬಗ್ಗೆ ಸಭೆ ನಡೆಯುತ್ತಿದ್ದು, ಹೀಗಾಗಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಶಾಸಕರು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ವಿಶೇಷವೇನಿಲ್ಲ. ಮುಖ್ಯಮಂತ್ರಿ ವಿಚಾರದ ಬಗ್ಗೆಯೂ ಹೈಕಮಾಂಡ್ ಬಳಿ ಚರ್ಚೆಯೂ ನಡೆಸುತ್ತಿಲ್ಲ, ಮುಖ್ಯಮಂತ್ರಿ ಬದಲಾವಣೆ ಸದ್ಯದಲ್ಲೆ ಆಗಲಿದ್ದು, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಸುದ್ದಿಗಾರರಿಗೆ ಪ್ರಶ್ನೆಗೆ ಉತ್ತರಿಸಿದರು.

ನಗರಸಭೆ ಪೌರಾಯುಕ್ತೆ ರಾಧಿಕಾ, ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲ ಅರುಣ್, ಸದಸ್ಯರಾದ ಸರ್ವಮಂಗಳಾ, ಸಚಿನ್, ವನಿತಾ ಮುಖಂಡರಾದ ಕದಲೂರು ರವಿ, ವಿಜಯ್ ಕುಮಾರ್, ಅರುಣ್ ಕುಮಾರ್, ಮಹಾಲಿಂಗಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.