ADVERTISEMENT

ಮದ್ದೂರಿನ ಸೊಸೆ ‘ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್'

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 23:59 IST
Last Updated 12 ಜನವರಿ 2025, 23:59 IST
ಡಾ.ಪ್ರಿಯಾ ಗೋಸ್ವಾಮಿ ‘ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್-2024’ ಕಿರೀಟ ಪಡೆದುಕೊಂಡರು
ಡಾ.ಪ್ರಿಯಾ ಗೋಸ್ವಾಮಿ ‘ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್-2024’ ಕಿರೀಟ ಪಡೆದುಕೊಂಡರು   

ಮದ್ದೂರು (ಮಂಡ್ಯ ಜಿಲ್ಲೆ): ಇಲ್ಲಿನ ಡಾ.ಪ್ರಿಯಾ ಗೋಸ್ವಾಮಿ ನವದೆಹಲಿಯಲ್ಲಿ ಈಚೆಗೆ ನಡೆದ ‘ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್ - 2024’ ಆಗಿ ಹೊರಹೊಮ್ಮಿದ್ದಾರೆ.

ಐದು ದಿನಗಳು ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಿಯಾ ಅವರು ‘ಎನ್‌ಚಾಂಟಿಂಗ್’ ವಿಭಾಗದ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಅದೇ ವೇದಿಕೆಯಲ್ಲಿ ‘ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್’ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ವೃತ್ತಿಯಲ್ಲಿ ಪಶು ವೈದ್ಯೆಯಾದ ಅವರು, ಪಂಜಾಬ್‌ ಮೂಲದವರು. ಗೋವಾದಲ್ಲಿ ಬೆಳೆದ ಅವರು, ಮದ್ದೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ದರಾಜು ಅವರ ಪುತ್ರ ಭಾರತೀಯ ಸೇನೆಯಲ್ಲಿರುವ ಕರ್ನಲ್ ಸಂಜಿತ್‌ ಅವರನ್ನು ವರಿಸಿದ್ದಾರೆ. ಸಂಜೀತ್ ಪ್ರಸ್ತುತ ಉತ್ತರಾಖಂಡ್‌ನಲ್ಲಿ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.