ADVERTISEMENT

ಮಂಡ್ಯ | ಮಹೇಶ್‌ ಜೋಶಿಗೆ ನೀಡಿದ್ದ ಸಚಿವ ಸ್ಥಾನ ವಾಪಸ್‌: ಕಬಾಬ್‌ ಹಂಚಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:50 IST
Last Updated 1 ಜೂನ್ 2025, 12:50 IST
   

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಅವರಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನ ಮತ್ತು ವಿಶೇಷ ಸವಲತ್ತುಗಳನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಸ್ವಾಗತಿಸಿದ ಮಂಡ್ಯ ಬಾಡೂಟ ಬಳಗದ ಕಾರ್ಯಕರ್ತರು ನಗರದಲ್ಲಿ ಚಿಕನ್‌ ಕಬಾಬ್‌ ಹಂಚಿ ತಿಂದು ಶನಿವಾರ ಸಂಭ್ರಮಿಸಿದರು.

‘ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿದ ಬಾಡೂಟ ಬಳಗದವರು ಘೋಷಣೆಗಳನ್ನು ಕೂಗಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಮುಖ್ಯಸ್ಥರಾಗಿ ಕನ್ನಡಪರ ಕೆಲಸಗಳಲ್ಲಿ ತೊಡಗಬೇಕಾದ ಜೋಶಿ ಅವರು ಬೈಲಾ ತಿದ್ದುಪಡಿ ಮೂಲಕ ಸರ್ವಾಧಿಕಾರಿಯಾಗಲು ಹೊರಟಿದ್ದರು’ ಎಂದು ಬಳಗದ ಎಂ.ಬಿ. ನಾಗಣ್ಣಗೌಡ ಆರೋಪಿಸಿದರು.

ಬಳಗದ ತಿಮ್ಮೇಗೌಡ ಮಾತನಾಡಿ, ‘ಜೋಶಿಯವರ ವಿರುದ್ದ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ಸಹ ನಡೆದಿತ್ತು. ಹಾಗಾಗಿ ರಾಜ್ಯ ಸರ್ಕಾರ ಜೋಶಿ ಅವರ ಸಂಪುಟ ಸ್ಥಾನಮಾನ ಹಿಂಪಡೆದಿದೆ. ಈ ಹಿನ್ನಲೆಯಲ್ಲಿ ನಮ್ಮ ಬಳಗದ ಸದಸ್ಯರೆಲ್ಲರೂ ಒಂದಗೂಡಿ ಸಾರ್ವಜನಿಕರಿಗೆ ಕಬಾಬು ಹಂಚುತ್ತಿದ್ದೇವೆ, ಈಗಲಾದರೂ ಜೋಶಿ ಅವರು ಕನ್ನಡದ ಕೆಲಸ ಮಾಡಿಕೊಂಡ ಹೋಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮುಖಂಡರಾದ ತಿಮ್ಮೇಗೌಡ, ಶ್ರೀಕಾಂತ್, ಎಂ.ವಿ.ಕೃಷ್ಣ, ಟಿ.ಡಿ.ನಾಗರಾಜು ಭಾಗವಹಿಸಿದ್ದುರು.

ಮಹೇಶ್‌ ಜೋಶಿ ಅವರಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನ ಮತ್ತು ವಿಶೇಷ ಸವಲತ್ತುಗಳನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಸ್ವಾಗತಿಸಿದ ಮಂಡ್ಯ ಬಾಡೂಟ ಬಳಗದ ಕಾರ್ಯಕರ್ತರು ನಗರದಲ್ಲಿ ಚಿಕನ್‌ ಕಬಾಬ್‌ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.