ಮಳವಳ್ಳಿ: ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ರಾಮನಗರ ಜಿಲ್ಲಾ ಆರಾಧ್ಯ ಮಹಾಸಭಾ ಹಾಗೂ ಪಂಚಾಚಾರ್ಯ ಕ್ರಿಕೆಟರ್ಸ್ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್ ಟೂರ್ನಿಗೆ ರಾಜ್ಯ ಆರಾಧ್ಯ ಜ್ಯೋತಿಷ್ಯ ಮತ್ತು ಪುರೋಹಿತರ ಸಂಘದ ಅಧ್ಯಕ್ಷ ಎಸ್.ನಾಗಭೂಷಣಾರಾಧ್ಯ ಚಾಲನೆ ನೀಡಿದರು.
ನಂತರ ನಾಗಭೂಷಣಾರಾಧ್ಯ ಮಾತನಾಡಿ, ‘ಸಮಾಜವನ್ನು ಅರಿತುಕೊಳ್ಳಲು ನಮಗೆ ಶಿಕ್ಷಣ ಎಷ್ಟು ಮುಖ್ಯಯೂ, ಆರೋಗ್ಯವಂತ ಜೀವನ ನಡೆಸಲು ಕ್ರೀಡೆ ಅಷ್ಟೇ ಮುಖ್ಯವಾಗಿದೆ. ಕ್ರೀಡಾಕೂಟದಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ರಾಮನಗರ ಜಿಲ್ಲಾ ಆರಾಧ್ಯ ಮಹಾಸಭಾ ಅಧ್ಯಕ್ಷ ಕೆ.ಬಿ.ಸಿದ್ದರಾಮಾರಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮಂಡ್ಯ, ಮೈಸೂರು, ರಾಮನಗರ ಹಾಗೂ ಚಾಮರಾಮನಗರ ಜಿಲ್ಲೆಗಳಿಂದ ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿವೆ’ ಎಂದರು.
ರಾಮನಗರ ಜಿಲ್ಲಾ ಆರಾಧ್ಯ ಮಹಾಸಭಾ ಉಪಾಧ್ಯಕ್ಷ ಮಲ್ಲಾರಾಧ್ಯ, ಕಾರ್ಯದರ್ಶಿ ಸಿದ್ಧಲಿಂಗಾರಾಧ್ಯ, ಖಂಜಾಚಿ ಉಮಾಶಂಕರ್ ಆರಾಧ್ಯ, ಉಮೇಶ್ ಆರಾಧ್ಯ ಹಾಗೂ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.