ADVERTISEMENT

ಮಳವಳ್ಳಿ | ಮಕ್ಕಳಿಗೆ ಸಂಸ್ಕಾರ ಕಲಿಸಿ: ಟಿ.ಎಂ.ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 6:33 IST
Last Updated 10 ಸೆಪ್ಟೆಂಬರ್ 2025, 6:33 IST
ಮಳವಳ್ಳಿ ಪಟ್ಟಣದ ಮಳವಳ್ಳಿ ಒನ್ ಕಂಪ್ಯೂಟರ್ ಕೇಂದ್ರದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಕವಿಗೋಷ್ಠಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅಗಸನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯೂನಿವರ್ಸಲ್ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಟ್ರ್ಯಾಕ್ ಶೂಟ್ ಗಳನ್ನು ಟಿ.ಎಂ.ಪ್ರಕಾಶ್ ವಿತರಿಸಿದರು
ಮಳವಳ್ಳಿ ಪಟ್ಟಣದ ಮಳವಳ್ಳಿ ಒನ್ ಕಂಪ್ಯೂಟರ್ ಕೇಂದ್ರದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಕವಿಗೋಷ್ಠಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅಗಸನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯೂನಿವರ್ಸಲ್ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಟ್ರ್ಯಾಕ್ ಶೂಟ್ ಗಳನ್ನು ಟಿ.ಎಂ.ಪ್ರಕಾಶ್ ವಿತರಿಸಿದರು   

ಮಳವಳ್ಳಿ: ಮಕ್ಕಳಿಗೆ ಶಿಕ್ಷಕರು ಶಿಕ್ಷಣದ ಜೊತೆ ಸಂಸ್ಕಾರವನ್ನು ಕಲಿಸುವ ಮೂಲಕ ಸಮಾಜದಲ್ಲಿ ಅವರನ್ನು ಉತ್ತಮ ಪ್ರಜೆಯಾಗಿ ರೂಪಿಸಬೇಕು ಎಂದು ಯೂನಿವರ್ಸಲ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ.ಎಂ.ಪ್ರಕಾಶ್ ಸಲಹೆ ನೀಡಿದರು.

ಇಲ್ಲಿನ ಮಳವಳ್ಳಿ ಒನ್ ಕಂಪ್ಯೂಟರ್ ಕೇಂದ್ರದ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ದಲಿತ ಸಾಹಿತ್ಯ ಪರಿಷತ್ ಹಾಗೂ ಯೂನಿವರ್ಸಲ್ ಸೇವಾ ಟ್ರಸ್ಟ್ ಆಯೋಜಿಸಿದ್ದ ರಾಜ್ಯಮಟ್ಟದ ಶಿಕ್ಷಕರ ಕವಿಗೋಷ್ಠಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಬದುಕು ರೂಪಿಸಲು ಶಿಕ್ಷಕರು ಶ್ರಮವಹಿಸಬೇಕು ಎಂದರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಕ ಪಿ.ಸುಂದ್ರಪ್ಪ ಲಿಂಗಪಟ್ಟಣ, ‘ಕಲಿಯುತ್ತಾ ಕಲಿಸುವವನೇ ನಿಜವಾದ ಶಿಕ್ಷಕ’ ಎಂದು ಹೇಳಿದರು.

ಮುಖ್ಯಶಿಕ್ಷಕಿ ನಾಗರತ್ನಾ, ಎಂ.ಬಿಸುಂದರಪ್ಪ, ನಯಾಜ್ ಪಾಷಾ, ರಮೇಶ್, ಕರುಣ ಕವಿತಾ, ಚೈತನ್ಯ, ಸಿದ್ದರಾಜು, ರಾಜು, ನಟರಾಜು, ಶಿವಶಂಕರ್, ಸೈಯದ್ ಸಾಹೇಸ್, ರಮೇಶ್, ಮಮತಾ, ರೂಪಾ, ನಾಗಯ್ಯ, ಕಾಳೇಗೌಡ ಸೇರಿದಂತೆ ಹಲವು ಶಿಕ್ಷಕರನ್ನು ಅಭಿನಂದಿಸಲಾಯಿತು.

ಹಲವು ಜಿಲ್ಲೆಗಳಿಂದ ಬಂದಿದ್ದ ಕವಿಗಳು ಕವನ ವಾಚಿಸಿದರು.

ಯೂನಿವರ್ಸಲ್ ಸೇವಾ ಟ್ರಸ್ಟ್ ವತಿಯಿಂದ ಅಗಸನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ರ್ಯಾಕ್‌ಸೂಟ್‌ಗಳನ್ನು ಪ್ರಧಾನ ಕಾರ್ಯದರ್ಶಿ ಟಿ.ಎಂ. ಪ್ರಕಾಶ್ ವಿತರಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಹುರುಗಲವಾಡಿ ರಾಮಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಚೇತನ್ ಕುಮಾರ್, ಮುಖಂಡರಾದ ಶಶಿ ರಾಜ್, ವಿಜಯ್ ಕುಮಾರ್, ಜಯರಾಜು, ಜಯಸ್ವಾಮಿ, ಶಿವಣ್ಣ, ಬೋರಯ್ಯ, ರಾಚಯ್ಯ, ಬಸವರಾಜು, ಮಹೇಶ್, ಸಿದ್ದರಾಜು, ಸುರೇಶ, ಮಹಾಲಿಂಗಯ್ಯ, ಪುಟ್ಟಸ್ವಾಮಿ, ಮಾದೇಗೌಡ, ಚುಂಚಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.