
ಪ್ರಜಾವಾಣಿ ವಾರ್ತೆ
ಮಂಡ್ಯ: ತಾಲ್ಲೂಕಿನ ಬಿ.ಯರಹಳ್ಳಿ ಸಮೀಪದ ವಿಶ್ವೇಶ್ವರಯ್ಯ ನಾಲೆಯಲ್ಲಿ ಸೋಮವಾರ ಬೆಳಗಿನ ಜಾವ 4.30ರ ಸಮಯದಲ್ಲಿ ಕಾರು ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಡ್ಯದ ಕಲ್ಲಹಳ್ಳಿ ನಿವಾಸಿ ಕೃಷ್ಣ ಪಾರಾದವರು. ಕಿರಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ತಡೆಗೋಡೆ ಇಲ್ಲದ ಕಾರಣ ನಾಲೆಗೆ ಬಿದ್ದಿದೆ.
ಭರ್ತಿ ಹರಿಯುತ್ತಿದ್ದ ನಾಲೆ ನೀರಿನೊಳಗೆ ಕಾರು ಮುಳುಗುವ ಸಂದರ್ಭ ಚಾಲಕ ಸಮಯಪ್ರಜ್ಞೆಯಿಂದ ಡೋರ್ ತೆರೆದು ಈಜಿಕೊಂಡು ದಡ ಸೇರಿದ್ದಾರೆ.
ನಾಲೆಯಲ್ಲಿ ಮುಳುಗಿದ್ದ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಮೇಲಕ್ಕೆತ್ತಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.