ADVERTISEMENT

ಮಂಡ್ಯ | ನದಿಗೆ ಕೆಆರ್‌ಎಸ್‌ ನೀರು ಬಿಡುಗಡೆ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 1:02 IST
Last Updated 10 ಮಾರ್ಚ್ 2024, 1:02 IST
<div class="paragraphs"><p> ಕೆಆರ್‌ಎಸ್‌ ಜಲಾಶಯ </p></div>

ಕೆಆರ್‌ಎಸ್‌ ಜಲಾಶಯ

   

ಮಂಡ್ಯ: ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಕೆಆರ್‌ಎಸ್‌ ಜಲಾಶಯದಿಂದ ಶನಿವಾರ 4 ಸಾವಿರ ಕ್ಯುಸೆಕ್‌ ನೀರು ಹರಿಸಲಾಗಿದ್ದು, ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

‘ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ 700 ಕ್ಯುಸೆಕ್‌ ನೀರು ಸಾಕು, ಆದರೆ 4 ಸಾವಿರ ಕ್ಯುಸೆಕ್‌ ನೀರು ಬಿಟ್ಟಿರುವುದೇಕೆ? ತಮಿಳುನಾಡಿಗೆ ನೀರು ಕೊಡುವ ಉದ್ದೇಶ ಸರ್ಕಾರದ್ದು’ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ADVERTISEMENT

ಭಾನುವಾರ ನಗರದಲ್ಲಿ ನಡೆಯಲಿರುವ ಗ್ಯಾರಂಟಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದು, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಲು ನಿರ್ಧರಿಸಲಿದ್ದಾರೆ.

‘ನೀರು ಬೆಂಗಳೂರಿಗೆ ತಲುಪುವಷ್ಟರಲ್ಲಿ ಅಪಾರ ಪ್ರಮಾಣ ಆವಿಯಾಗಲಿದೆ. ಹೀಗಾಗಿ 4 ಸಾವಿರ ಕ್ಯುಸೆಕ್‌ ಬಿಡುಗಡೆ ಮಾಡಲಾಗಿದೆ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.