ADVERTISEMENT

ಹಲಗೂರು | 10 ಅಡಿ ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 13:20 IST
Last Updated 27 ಜೂನ್ 2025, 13:20 IST
ಹಲಗೂರು ಸಮೀಪದ ಡಿ.ಹಲಸಹಳ್ಳಿ ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಯಿತು 
ಹಲಗೂರು ಸಮೀಪದ ಡಿ.ಹಲಸಹಳ್ಳಿ ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಯಿತು    

ಹಲಗೂರು (ಮಂಡ್ಯ ಜಿಲ್ಲೆ): ಸಮೀಪದ ಡಿ.ಹಲಸಹಳ್ಳಿ ಹೊರವಲಯದಲ್ಲಿ ಶುಕ್ರವಾರ ಬೆಳಿಗ್ಗೆ ರೈತ ಸಿದ್ದೇಗೌಡರ ಜಮೀನಿನಲ್ಲಿ 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ.

ಹಸುಗಳಿಗೆ ಸೀಮೆ ಹುಲ್ಲು ಕೊಯ್ಯಲು ಜಮೀನಿಗೆ ಹೋಗಿದ್ದ ಅವರ ಪುತ್ರನಿಗೆ ಹುಲ್ಲಿನ ನಡುವೆ ಹೆಬ್ಬಾವು ಕಾಣಿಸಿತ್ತು. ಧನಗೂರು ಅರಣ್ಯ ವ್ಯಾಪ್ತಿಯ ಗಸ್ತು ಪಾಲಕ ಪುನೀತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಗ್ರಾಮದ ಸ್ನೇಕ್ ಜಗದೀಶ್ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು, ಶಿಂಷಾ ಅರಣ್ಯ ಪ್ರದೇಶಕ್ಕೆ ಬಿಟ್ಟರು. 

ಜನ ವಸತಿ ಪ್ರದೇಶ, ಜಮೀನು ಪ್ರದೇಶಗಳಲ್ಲಿ ಯಾವುದೇ ಬಗೆಯ ಹಾವುಗಳು ಕಂಡು ಬಂದರೆ ಮೊಬೈಲ್‌ ಫೋನ್‌  8431500189 ಕರೆ ಮಾಡಿದರೆ, ಹಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು ಎಂದು ಜಗದೀಶ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.