ADVERTISEMENT

ಜನರ ಸಮಸ್ಯೆ ಆಲಿಸಲು ‘ಮೇಲುಕೋಟೆ ವಾಣಿ’ ಆ್ಯಪ್ ಆರಂಭಿಸಿದ ದರ್ಶನ್ ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:47 IST
Last Updated 13 ಅಕ್ಟೋಬರ್ 2025, 2:47 IST
ಮೇಲುಕೋಟೆಯಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್‌ ಹಾಗೂ ರೈತ ಸಂಘದ ಮುಖಂಡರು ಜನರಿಗೆ ‘ಮೇಲುಕೋಟೆ ವಾಣಿ’ ಆ್ಯಪ್‌ ಬಗ್ಗೆ ಮಾಹಿತಿ ನೀಡಿದರು
ಮೇಲುಕೋಟೆಯಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್‌ ಹಾಗೂ ರೈತ ಸಂಘದ ಮುಖಂಡರು ಜನರಿಗೆ ‘ಮೇಲುಕೋಟೆ ವಾಣಿ’ ಆ್ಯಪ್‌ ಬಗ್ಗೆ ಮಾಹಿತಿ ನೀಡಿದರು   

ಮೇಲುಕೋಟೆ: ಕ್ಷೇತ್ರದ ರೈತರ, ಬಡವರ ಹಾಗೂ ಮಹಿಳೆಯರ ಮಕ್ಕಳ ಸಮಸ್ಯೆ, ಬೇಡಿಕೆಯನ್ನು ಕುಳಿತಲ್ಲಿಯೇ ಆಲಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಆರಂಭಿಸಿರುವ ‘ಮೇಲುಕೋಟೆ ವಾಣಿ’ ವಿಶೇಷ ಮೊಬೈಲ್ ಆ್ಯಪ್ ಮೂಲಕ ಭಾನುವಾರ ಹಳ್ಳಿಗಳಲ್ಲಿ ಜನರಿಗೆ ಮಾಹಿತಿ ನೀಡಲಾಯಿತು.

‘ಹೋಬಳಿಯ ಹಳೇಬೀಡು, ಹೊಸಕೋಟೆ, ಸುಂಕತೊಣ್ಣುರು, ಕೆರೆತೊಣ್ಣುರು, ಲಕ್ಷ್ಮೀಸಾಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತ ಸಂಘದ ಮುಖಂಡರು ಹಾಗೂ ಪುಟ್ಟಣ್ಣಯ್ಯ ಫೌಂಡೇಶನ್ ಕಾರ್ಯಕರ್ತರು ಆ್ಯಪ್‌ ಮೂಲಕ ಹೇಗೆ ಬೇಡಿಕೆ ಹಾಗೂ ದೂರುಗಳನ್ನು ಹೇಗೆ ಸಲ್ಲಿಸಬಹುದು ಎಂಬುದನ್ನು ತಿಳಿಸಿಕೊಟ್ಟರು. ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಶಾಸಕರು ಏನು ಕೆಲಸ ಮಾಡಬೇಕು. ಎಷ್ಟು ಅನುದಾನ ಬೇಕು ಎಂದು ಹೇಳಿದರು. ಶಾಸಕರು ನೇರವಾಗಿ ಉತ್ತರಿಸಲಿದ್ದಾರೆ’ ಎಂದು ಹೇಳಿದರು.

‘ದರ್ಶನ್ ಪುಟ್ಟಣ್ಣಯ್ಯ ಅವರು ಶಾಸಕರಾಗುವ ಮೊದಲು ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ಮೂಲ ವೃತ್ತಿಯ ಮೂಲಕವೇ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರು ಆ ಆ್ಯಪ್ ಮೂಲಕ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಬಳಿಕ ಅವರ ಸಮಸ್ಯೆ, ಬೇಡಿಕೆ ಆಲಿಸಿ ಅದನ್ನು ಪರಿಹರಿಸಲಿದ್ದಾರೆ’ ಎಂದರು.

ADVERTISEMENT

ಆ್ಯಪ್ ಕಾರ್ಯನಿರ್ವಹಣೆ ಹೇಗೆ?

‘ಜನರ ಸಮಸ್ಯೆಗಳನ್ನ ಆ್ಯಪ್‌ನಲ್ಲಿ ಪಟ್ಟಿ ಮಾಡಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರವಾನೆ ಮಾಡಲಿದ್ದು, ಪಟ್ಟಿ ಮಾಡಿದ ಸಮಸ್ಯೆಗಳ ಪರಿಹಾರದ ಫಾಲೋ ಅಪ್ ಅನ್ನು ಶಾಸಕರ ಕಚೇರಿ ಸಿಬ್ಬಂದಿ ಮಾಡಲಿದ್ದಾರೆ. ಮನೆ ಮನೆಗಳಿಗೆ ತೆರಳಿ ಜನರ ಸಮಸ್ಯೆ ಪಟ್ಟಿ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಕಾರ್ಯದರ್ಶಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ಆ್ಯಪ್‌ನಿಂದ ಸರ್ಕಾರಿ ಕಚೇರಿಗಳಿಗೆ ಜನ ಅಲೆಯುವುದನ್ನು ತಪ್ಪಿಸಬಹುದಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.