ಮಂಡ್ಯ: ಕೋವಿಡ್ ನಡುವೆಯೂ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರಿಗೆ ಸಚಿವ ನಾರಾಯಣ ಗೌಡ ಊಟ ಬಡಿಸಿದರು. ಬಳಿಕ ಅವರ ಜೊತೆಯಲ್ಲಿಯೇ ಕುಳಿತು ಊಟ ಮಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಭಾನುವಾರ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿದ ಅವರು, ‘ಕೊರೊನಾ ನಿಯಂತ್ರಣದಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದು. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತ ಪಟ್ಟವರಲ್ಲಿ 42 ಜನರನ್ನುದಫನ್ ಮಾಡಿದ ಜೆಸಿಬಿ ಚಾಲಕ ರಂಗಸ್ವಾಮಿ ಕಾರ್ಯ ಶ್ಲಾಘನೀಯ. ಎಸ್.ಎಂ. ಕೃಷ್ಣ ಬಿಟ್ಟರೆ ಜಿಲ್ಲೆಗೆ ಹೆಚ್ಚಿನ ಕೆಲಸ ಮಾಡಿದ್ದು ಮುಖ್ಯಮಂತ್ರಿ ಬಿಎಸ್‌ವೈ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.