ದಂಡ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ಮಳವಳ್ಳಿ: ಬಾಲಕನಿಗೆ ಚಾಲನೆಗೆ ಬೈಕ್ ನೀಡಿದ ಬೈಕ್ ಮಾಲೀಕನಿಗೆ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
2020ರ ನವೆಂಬರ್‌ನಲ್ಲಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಚನ್ನಪಿಳ್ಳೆಕೊಪ್ಪಲು ಗ್ರಾಮದ ಬೀರಯ್ಯ ಎಂಬುವವರು ಚಾಲನೆಗಾಗಿ ಬಾಲಕನಿಗೆ ತಮ್ಮ ಬೈಕ್ ನೀಡಿದ್ದರು. ಈ ವೇಳೆ ಮಳವಳ್ಳಿ-ಮೈಸೂರು ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಗ್ರಾಮಾಂತರ ಪೊಲೀಸರು ಬೈಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಅವರು ಬೈಕ್ ನೀಡಿದ್ದ ಮಾಲೀಕ ಬೀರಯ್ಯಗೆ ಭಾರತೀಯ ಮೋಟಾರ್ ವಾಹನ ಕಾಯ್ದೆ 199(ಎ)(2)ರಂತೆ 25 ಸಾವಿರ ದಂಡ ಹಾಗೂ ಮೂರು ದಿನಗಳ ಸಾಧಾರಣ ಸಜೆ ವಿಧಿಸಿ ಸೋಮವಾರ ಆದೇಶ ನೀಡಿದ್ದಾರೆ.
ಈಗಾಗಲೇ ಬೀರಯ್ಯ 2025ರ ಜುಲೈನಲ್ಲಿ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ದಂಡ ಪಾವತಿಗೆ ಮಾತ್ರ ಆದೇಶಿಸಿರುವ ನ್ಯಾಯಾಧೀಶರು, ದಂಡ ಪಾವತಿ ವಿಫಲರಾದರೆ 22 ದಿನಗಳ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.