ಮಂಡ್ಯ: ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶೀಕಂಠಯ್ಯ ಅವರಿಗೆ ಸೋಮವಾರ ಕೋವಿಡ್–19 ದೃಢಪಟ್ಟಿದೆ. ಜೊತೆಗೆ ಅವರ ಪತ್ನಿ ಗೀತಾ, ಶಾಸಕರ ತಾಯಿ ಹಾಗೂ ಮಾಜಿ ಶಾಸಕಿ ಪಾರ್ವತಮ್ಮ ಅವರಲ್ಲೂ ಸೋಂಕು ಪತ್ತೆಯಾಗಿದೆ.
ಶಾಸಕರು ಹಾಗೂ ಪತ್ನಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾರ್ವತಮ್ಮ ಅವರನ್ನು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಮ್ಮ ಸಂಪರ್ಕಕ್ಕೆ ಬಂದವರು ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.