ADVERTISEMENT

ಮತದಾನಕ್ಕೆ ಕ್ಷಣಗಣನೆ, ಕೊನೆ ಕ್ಷಣದ ಕಸರತ್ತು

ಪದವೀಧರ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ: 19 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಮತಪೆಟ್ಟಿಗೆಗೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 3:13 IST
Last Updated 13 ಜೂನ್ 2022, 3:13 IST
ಮಂಡ್ಯ ವಿಶ್ವವಿದ್ಯಾಲಯ ಆವರಣದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಕರಗಳೊಂದಿಗೆ ಮತಗಟ್ಟೆಗಳತ್ತ ತೆರಳಿದರು
ಮಂಡ್ಯ ವಿಶ್ವವಿದ್ಯಾಲಯ ಆವರಣದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಕರಗಳೊಂದಿಗೆ ಮತಗಟ್ಟೆಗಳತ್ತ ತೆರಳಿದರು   

ಮಂಡ್ಯ: ವಿಧಾನ ಪರಿಷತ್‌ ದಕ್ಷಿಣ ಪದವೀಧರ ಕ್ಷೇತ್ರದ ಮತ ದಾನ ಸೋಮವಾರ ನಡೆಯ ಲಿದ್ದು,ಭಾನು ವಾರ ಮಂಡ್ಯ ವಿಶ್ವ ವಿದ್ಯಾಲಯ ಆವರ ಣದಲ್ಲಿ ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು.

ಮಂಡ್ಯ ತಾಲ್ಲೂಕಿನಲ್ಲಿ 15,925 ಪದವೀಧರ ಮತದಾರರಿದ್ದು, 15 ಮತ್ತು 16 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೋಬಳಿ ಮಟ್ಟದ ಕಸಬಾ ಹಾಗೂ ಕೊತ್ತತ್ತಿ ಭಾಗದ ಮತಗಟ್ಟೆ ಕೇಂದ್ರ 15, ಇನ್ನುಳಿದ ಹೋಬಳಿಗಳ ವ್ಯಾಪ್ತಿಯ ಕಸಬಾ ಸೇರಿದಂತೆ ಮತದಾನಕ್ಕೆ ನಗರದ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಭವನದಲ್ಲಿ ಮತ ದಾನ ಕೇಂದ್ರಗಳನ್ನು ತೆರೆಯಲಾಗಿದೆ.

ಮತಗಟ್ಟೆ ವಿವರ:ಮಂಡ್ಯ ನಗರದ ಸುಭಾಷ್‌ನಗರ, ವಿಶ್ವೇಶ್ವರ ನಗರ, ಕಲ್ಲಹಳ್ಳಿ, ಬಂದೀಗೌಡ ಬಡಾವಣೆ, ಶಂಕರಪುರ, ಆಜಾದ್‌ ನಗರ, ಹಳೇ ಟೌನ್‌ನ ಮತಗಟ್ಟೆ ಸಂಖ್ಯೆ 17 ಮತ್ತು 17ಎ, ಶಂಕರನಗರ, ಕುವೆಂಪು ನಗರ, ಮರೀಗೌಡ ಬಡಾವಣೆ, ಕೆಇಬಿ ಕಾಲೊನಿ, ಚಾಮುಂಡೇಶ್ವರಿ ನಗರ, ಚಂದಗಾಲು ಬಡಾವಣೆ 18 ಮತ್ತು 18ಎ, ಗಾಂಧಿನಗರ, ವಿದ್ಯಾನಗರ, ಕಾವೇರಿ ನಗರ, ವಿನಾಯಕ ಬಡಾವಣೆ, ಹೊಸಹಳ್ಳಿ, ಕಾರಸವಾಡಿ ರಸ್ತೆ 19, 19ಎ, ಅಶೋಕ್‌ನಗರ, ನೆಹರೂನಗರ, ಶಿವನಂಜಪ್ಪ ಬಡಾವಣೆ, ಗುತ್ತಲು, ಸ್ವರ್ಣಸಂದ್ರ, ರಾಜಕುಮಾರ ಬಡಾವಣೆ 20, 20ಎ ಮತಗಟ್ಟೆ ಸಂಖ್ಯೆಯಾಗಿದ್ದು, ಮಂಡ್ಯ ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ನಡೆಯಲಿದೆ.

ADVERTISEMENT

ಕಸಬಾ ಹೋಬಳಿ ಮತ್ತು ಕೊತ್ತತ್ತಿ ಹೋಬಳಿ 15, 15ಎ, 15ಬಿ, 15ಸಿ, ದುದ್ದ, ಕೆರಗೋಡು ಮತ್ತು ಬಸರಾಳು ಹೋಬಳಿಯ ಮತದಾರರಿಗೆ 16, 16ಎ, 16ಬಿ ಮತಗಟ್ಟೆ ಸಂಖ್ಯೆ ತೆರೆದು ಮತದಾನಕ್ಕೆ ಮಂಡ್ಯ ವಿವಿಯ ವಾಣಿಜ್ಯ ಭವನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ 8 ರಿಂದ 5 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಕೆ.ಆರ್.ಪೇಟೆಯಲ್ಲಿ 3,326, ನಾಗಮಂಗಲದಲ್ಲಿ 2,959, ಪಾಂಡ ವಪುರ- 3,705, ಮಂಡ್ಯ- 15,925, ಮದ್ದೂರು- 10,360, ಶ್ರೀರಂಗಪಟ್ಟಣ- 3,307, ಮಳವಳ್ಳಿ- 7,720 ಸೇರಿ 47,302 ಮತದಾರರಿದ್ಧಾರೆ. ಕೆ.ಆರ್.ಪೇಟೆ-3, (ಮಿನಿ ವಿಧಾನಸೌಧದ 3 ವಿವಿಧ ಕೊಠಡಿ) ನಾಗಮಂಗಲ- 3 (ಮಿನಿ ವಿಧಾನಸೌಧದ 3 ವಿವಿಧ ಕೊಠಡಿ), ಪಾಂಡವಪುರ-04 (ಮಿನಿ ವಿಧಾನಸೌಧದ 1 ಕೊಠಡಿ ಹಾಗೂ ತಾಲ್ಲೂಕು ಕಚೇರಿಯ 3 ವಿವಿಧ ಕೊಠಡಿ), ಮಂಡ್ಯದ 15 (ಮಂಡ್ಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ 7 ವಿವಿಧ ಕೊಠಡಿ ಹಾಗೂ ಮಂಡ್ಯ ವಿಶ್ವವಿದ್ಯಾಲಯ ವಿಜ್ಞಾನ ವಿಭಾಗದ 8 ಕೊಠಡಿ) ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.

ಮದ್ದೂರು- 10 (ಮಿನಿ ವಿಧಾನಸೌಧದ 2 ಕೊಠಡಿ, ತಾಲ್ಲೂಕು ಪಂಚಾಯಿತಿ ಕಚೇರಿಯ 2 ಕೊಠಡಿ, ಸರ್ಕಾರಿ ಮಹಿಳಾ ಕಾಲೇಜಿನ ಹಳೆ ಕಟ್ಟಡದ 3 ಕೊಠಡಿ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಹೊಸ ಕಟ್ಟಡದ 3 ಕೊಠಡಿ), ಶ್ರೀರಂಗಪಟ್ಟಣ- 3(ಮಿನಿ ವಿಧಾನಸೌಧದ 3 ಕೊಠಡಿ), ಮಳವಳ್ಳಿ-7 (ಮಿನಿ ವಿಧಾನಸೌಧದ 2 ಕೊಠಡಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯ ವಿವಿಧ 5 ಕೊಠಡಿ) ಸೇರಿ 45 ಮತಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ.

ಪ್ರತಿ ಮತಗಟ್ಟೆಗೆ ಒಬ್ಬರು ಪ್ರಿಸೈ ಡಿಂಗ್ ಅಧಿಕಾರಿ, ಮೂವರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್‌ವರ್ ನೇಮಕ ಮಾಡಲಾಗಿದೆ. 45 ಮೈಕ್ರೋ ಅಬ್ಸರ್‌ವರ್, ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ ಪೋಲಿಂಗ್ ಅಧಿಕಾರಿಗಳು ಸೇರಿದಂತೆ ಒಟ್ಟು 180 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಂದೂಬಸ್ತ್‌ಗೆಂದು ಚುನಾವಣಾ ಕಾರ್ಯಕ್ಕಾಗಿ ಡಿ.ಎಸ್.ಪಿ- 4, ಸಿಪಿಐ, ಪಿಐ- 15, ಪಿಎಸ್‌ಐ- 20, ಎಎಸ್ಐ- 45, ಸಿಎಚ್‌ಸಿ- 71, ಸಿಪಿಸಿ- 112 ಸಿಬ್ಬಂದಿ, 9 ಡಿಎಆರ್ ತುಕಡಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.