ADVERTISEMENT

ಮೋದಿ ಜನ್ಮದಿನ: 70 ದೇಗುಲಗಳಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 3:39 IST
Last Updated 18 ಸೆಪ್ಟೆಂಬರ್ 2020, 3:39 IST
ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ನಿಮಿತ್ತ ಬಿಜೆಪಿ ಕಾರ್ಯಕರ್ತರು ಗುರುವಾರ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು
ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ನಿಮಿತ್ತ ಬಿಜೆಪಿ ಕಾರ್ಯಕರ್ತರು ಗುರುವಾರ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು   

ಶ್ರೀರಂಗಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ನಿಮಿತ್ತ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ 70 ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ ನೇತೃತ್ವದಲ್ಲಿ ಪೂಜೆಗಳು ನಡೆದವು. ವಿಶೇಷ ಪೂಜೆ, ಅರ್ಚನೆ, ಅಭಿಷೇಕ ನೆರವೇರಿಸಿ, ಸಿಹಿ ಹಂಚಿದರು.

‘ಮೋದಿ ಅವರು ದೇಶದ ಹಿರಿಮೆ ಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅವರ ಆತ್ಮ ನಿರ್ಭರ್‌ ಭಾರತ್ ಪರಿಕಲ್ಪನೆ ವಿಶ್ವಮಾನ್ಯತೆ ಪಡೆದಿದೆ. ರೈತರು, ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಬಡ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದು, ಜನರ ಮನ ಗೆದ್ದಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಟಿ. ಶ್ರೀಧರ್‌ ಮಾತನಾಡಿದರು. ಮುಖಂಡರಾದ ಉಮೇಶ್‌ಕುಮಾರ್‌, ಬಿ.ಸಿ. ಸಂತೋಷ್‌ಕುಮಾರ್‌, ಮಹದೇವು, ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಉಮೇಶ್‌, ಎಂ.ಸಿ. ನಾಗರಾಜು, ಕೃಷ್ಣಪ್ಪ, ಚಂದಗಾಲು ಶಂಕರ್‌, ಸುಭಾಷ್‌ ಜೈನ್‌, ಪಾಲಹಳ್ಳಿ ಶಿವಣ್ಣ, ಮಹದೇವು, ಪುಟ್ಟರಾಮು, ಮಂಜುನಾಥ್‌, ಕಿಶೋರ್‌ ಇದ್ದರು.

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಜಯರಾಂ, ರಮೇಶ್‌, ಮುರಳಿ ಇತರರು ನರೇಂದ್ರ ಮೋದಿ ಅವರ ಜನ್ಮದಿನ ಆಚರಿಸಿದರು. ಮೋದಿ ಅವರ ಕಟೌಟ್‌ಗೆ ಕ್ಷೀರ ಮತ್ತು ಪುಷ್ಪಾಭಿಷೇಕ ಮಾಡಿದರು. ಸಿಹಿ ವಿತರಣೆ ನಡೆಯಿತು.

ಲ್ಲೂಕಿನ ಅರಕೆರೆ, ಕೆಆರ್‌ಎಸ್‌, ಮಹದೇವಪುರ, ಬಲ್ಲೇನಹಳ್ಳಿ, ಕೊಡಿಯಾಲ ಇತರೆಡೆ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇವಾಲಯಗಳಲ್ಲಿ ಪೂಜೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.