ADVERTISEMENT

ಗಮಕಿ ನಾರಾಯಣಗೌಡ ನಿಧನ

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:48 IST
Last Updated 31 ಆಗಸ್ಟ್ 2020, 18:48 IST
ಗಮಕಿ ನಾರಾಯಣಗೌಡ
ಗಮಕಿ ನಾರಾಯಣಗೌಡ   

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದ ಗಮಕ ಕಲಾವಿದ ನಾರಾಯಣಗೌಡ (78) ಭಾನುವಾರ ರಾತ್ರಿ ನಿಧನರಾದರು.

ಅವರಿಗೆ ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ.ಸ್ವಗ್ರಾಮದಲ್ಲಿ ಸೋಮವಾರ ಮಧ್ಯಾಹ್ನಅಂತ್ಯಕ್ರಿಯೆ ನಡೆಯಿತು.

ನಾರಾಯಣಗೌಡ ಅವರು ಕುವೆಂಪು ವಿರಚಿತ ‘ರಾಮಾಯಣ ದರ್ಶನಂ’, ಲಕ್ಷ್ಮೀಶನ ‘ಜೈಮಿನಿ ಭಾರತ’, ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಹಾಗೂ ಇತರ ಕೃತಿಗಳನ್ನು ನಿರರ್ಗಳವಾಗಿ ವಾಚಿಸುತ್ತಿದ್ದರು. ಮಹಾ ಛಂದಸ್ಸಿನಲ್ಲಿ ಪ್ರೌಢಿಮೆ ಹೊಂದಿದ್ದರು.

ADVERTISEMENT

ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ, ‘ಚುಂಚಶ್ರೀ’, ನಾಡಪ್ರಭು ಕೆಂಪೇಗೌಡ, ಕುವೆಂಪು ಕಲಾನಿಕೇತನ, ‘ಡಾ.ಅಂಬೇಡ್ಕರ್‌’, ಸರ್‌ ಎಂ.ವಿಶ್ವೇಶ್ವರಯ್ಯ ಸಾಧಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ– ಪುರಸ್ಕಾರಗಳು ಅವರಿಗೆ ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.