
ಮಂಡ್ಯ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಜ.25 ರಿಂದ 28ರವರೆಗೆ ರಾಷ್ಟ್ರೀಯ ಸಮ್ಮೇಳನ ಹೈದರಾಬಾದಿನಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಸಾಮ್ರಾಜ್ಯ ಶಾಹಿ ವಿರೋಧಿಸಿ, ಮನುವಾದವನ್ನು ಧಿಕ್ಕರಿಸಿ ಮಹಿಳಾ ಹಕ್ಕುಗಳನ್ನು ಎತ್ತಿ ಹಿಡಿಯೋಣ ಎಂಬ ಘೋಷಣೆಯೊಂದಿಗೆ ಸಮ್ಮೇಳನ ನಡೆಯಲಾಗುತ್ತಿದೆ ಎಂದರು.
ದೇಶದ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಯಾಗಿ ಸಮಾಜದಲ್ಲಿ ಕಾಣಲಾಗುತ್ತಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡುವ ಮೂಲ ಉದ್ದೇಶ ಹೊಂದಲಾಗಿದೆ. ಹಾಗಾಗಿ 14ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದರು.
ಈ ಸಮ್ಮೇಳನಕ್ಕೆ ಎಲ್ಲ ರಾಜ್ಯಗಳಿಂದ ಸಂಘಟನೆಯ ಪ್ರತಿನಿಧಿಗಳು, ವೀಕ್ಷಕರು ಭಾಗವಹಿಸುವರು. ಜಿಲ್ಲೆಯಿಂದ ಆರು ಜನ ಸೇರಿದಂತೆ ರಾಜ್ಯದಿಂದ ಒಟ್ಟು 25 ಪ್ರತಿನಿಧಿಗಳು ಭಾಗವಹಿಸುವರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಘಟನೆಯ ಡಿ.ಕೆ.ಲತಾ, ಸುಶೀಲಾ, ಮಂಜುಳಾ, ವಿಶಾಲು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.