ADVERTISEMENT

ಮಿಮ್ಸ್‌ನಲ್ಲಿ ನರ್ಸಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 4:23 IST
Last Updated 3 ಆಗಸ್ಟ್ 2025, 4:23 IST
ನಿಷ್ಕಲಾ 
ನಿಷ್ಕಲಾ    

ಮಂಡ್ಯ: ಇಲ್ಲಿಯ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಮಿಮ್ಸ್‌) ಶನಿವಾರ ನರ್ಸಿಂಗ್‌ ವಿದ್ಯಾರ್ಥಿನಿ ನಿಷ್ಕಲಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜುಲೈ 21ರಂದು ಕೊಪ್ಪಳ ಮೂಲದ ಮೆಡಿಕಲ್‌ ವಿದ್ಯಾರ್ಥಿ ಭರತ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. 10 ದಿನಗಳ ಅಂತರದಲ್ಲೇ ಇಬ್ಬರು ವಿದ್ಯಾರ್ಥಿಗಳು ಮಿಮ್ಸ್‌ನಲ್ಲಿ ಆತ್ಮಹತ್ಯೆಗೆ ಶರಣರಾಗಿದ್ದಾರೆ. 

ಮಂಡ್ಯ ತಾಲ್ಲೂಕಿನ ಗುನ್ನಾಯಕನಹಳ್ಳಿಯ ನಿಷ್ಕಲಾ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್‌ ಓದುತ್ತಿದ್ದರು. ಸಹಪಾಠಿ ಪಕ್ಕದ ಕೊಠಡಿಗೆ ತೆರಳಿದ್ದ ವೇಳೆ ನೇಣಿಗೆ ಶರಣಾರಾಗಿದ್ದಾರೆ ಎನ್ನಲಾಗಿದೆ. 

ADVERTISEMENT

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.