ADVERTISEMENT

ಪಾಂಡವಪುರ: ವಿಜೃಂಭಣೆಯ ಪಟ್ಟಲಮ್ಮ ದೇವಿ ಕೊಂಡೋತ್ಸವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 4:13 IST
Last Updated 28 ಫೆಬ್ರುವರಿ 2026, 4:13 IST
<div class="paragraphs"><p>ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಪಟ್ಟಲದಮ್ಮ ದೇವಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು</p></div>

ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಪಟ್ಟಲದಮ್ಮ ದೇವಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು

   

ಪಾಂಡವಪುರ: ತಾಲ್ಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಗ್ರಾಮದ ದೇವತೆ ಶ್ರೀಪಟ್ಟಲಮ್ಮ ದೇವಿಯ ಮಹೋತ್ಸವ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.

ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪಟ್ಟಲಮ್ಮ ದೇವಿಯ ಮೂರ್ತಿಯನ್ನು ಚನ್ನಿಗರಾಯಸ್ವಾಮಿ ದೇವಸ್ಥಾನದ ಬಳಿ ಇಟ್ಟು ಹೂ ಮತ್ತು ಹೊಂಬಾಳೆಗಳಿಂದ ಶೃಂಗರಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಿತು.

ADVERTISEMENT

ದೇವರ ಗುಡ್ಡ, ದೇವರ ಮೂರ್ತಿಯನ್ನು ತಲೆ ಮೇಲೆ ಹೊತ್ತುಕೊಂಡು ಪಟ್ಟಲದಮ್ಮ ದೇವಸ್ಥಾನದ ಮುಂಭಾಗ ಸಿದ್ಧಗೊಳಿಸಲಾಗಿದ್ದ ಬೆಂಕಿಯ ಕೊಂಡದಲ್ಲಿ ಹಾಯ್ದರು. ಕೊಂಡೋತ್ಸವನ್ನು ಕಣ್ತುಂಬಿಕೊಂಡ ಭಕ್ತರು ಕೈಮುಗಿದ ನಮಸ್ಕರಿಸಿದರು.

ಮಹಿಳೆಯರು ತಂಬಿಟ್ಟು ಆರತಿಯೊಂದಿಗೆ ಮಾರಮ್ಮನ ದೇವಸ್ಥಾನದ ಬಳಿ ಜಮಾಯಿಸಿದರು. ತಮಟೆ ಬಡಿತವು ತಂಬಿಟ್ಟು ಆರತಿಗೆ ಮೆರುಗು ನೀಡಿತು. ಬಳಿಕ ದೇವಿಗೆ ಮೇಕೆ ಮತ್ತು ಕೋಳಿಗಳನ್ನು ಬಲಿಕೊಟ್ಟು ಪೂಜೆ ಪುನಸ್ಕಾರ ಸಲ್ಲಿಸಲಾಯಿತು. ಪಟ್ಟಲದೇವಮ್ಮ ಹಬ್ಬದಲ್ಲಿ ಗ್ರಾಮದ ಯಜಮಾನರು, ಮುಖಂಡರು, ಯುವಕ–ಯುವತಿಯರು ಭಾಗವಹಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.